ಹುಬ್ಬಳ್ಳಿ: ನಗರದ ಮಿನಿ ವಿಧಾಸೌಧ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮಾಧ್ಯಮ ಅಕಾಡೆಮಿಯಿಂದ ಕೊಡಮಾಡುವ ನಾಲ್ಕು ವರ್ಷಗಳ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು, ಆಯಾ ಪುರಸ್ಕೃತರು ಕೆಲಸ ಮಾಡುತ್ತಿರುವ ಜಿಲ್ಲೆಯ ಹೆಸರಿನ ಜೊತೆಗೆ ಮರುಪ್ರಕಟಿಸಬೇಕು. ಇಲ್ಲವಾದರೆ ನಾವು ಮಾರ್ಚ್ 13ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ

ಸಲ್ಲಿಸಲಾಯಿತು. ಮಾಧ್ಯಮ ಅಕಾಡೆಮಿ ಸದ್ಯ ಪ್ರಶಸ್ತಿ ನೀಡಿರುವ ಪತ್ರಕರ್ತರ ಆಯಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿಲ್ಲ. ಕೆಲವರು ಬೆಂಗಳೂರಿನಲ್ಲಿ ವೃತ್ತಿಯಲ್ಲಿದ್ದರೆ ಇನ್ನೂ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸದ್ಯ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳಲ್ಲಿ ಹೆಸರಿನಲ್ಲಿ ಪ್ರಶಸ್ತಿ ಮರುಪ್ರಕಟಿಸಿ ಪ್ರಾಂತ್ಯವಾರು ಸಮತೋಲನ ಕಾಪಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದಲ್ಲದೇ ಪತ್ರಕರ್ತರ ಮನವಿ ಸರ್ಕಾರ ಸ್ಪಂದಿಸದೇ ಇದ್ದರೆ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ಹಿರಿಯ ಪತ್ರಕರ್ತರಾದ ಸುಭಾಷ ಹೂಗಾರ, ಬಸವರಾಜ ಹೂಗಾರ, ಹನುಮಂತ ಗಡ್ಡದ, ಸಂಗಮೇಶ ಮೆಣಸಿನಕಾಯಿ, ವಿಜಯ ಹೂಗಾರ, ಅಬ್ಬಾಸ ಮುಲ್ಲಾ, ಯಲ್ಲಪ್ಪ ಸೋಲಾರಗೊಪ್ಪ, ಹಜರತ್ ನದಾಫ. ಎಂ. ಎ. ಶೇಖ್. ಶಿವರಾಮ ಅಸುಂಡಿ, ಓದೇಶ ಸಕಲೇಶಪೂರ, ಪರಶುರಾಮ ತಹಶೀಲ್ದಾರ, ವಾಜಿ, ಆನಂದ, ರಾಜು ಅಂಗಡಿ, ರೋಹನ ಹುನಸ್ವಾಡ್ಕರ್, ಮಹೇಶ ಈರಣ್ಣ ವಾಲಿಕಾರ, ಮೈಲಾರ ಪಟಾತ್, ನವೀನ ಸೋಲಾರಗೊಪ್ಪ, ಯಲ್ಲಪ್ಪ ಕುಂದಗೋಳ ಇತರ ಪತ್ರಕರ್ತ ನಿಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.

bigtvnews | Hubli Dharwad News | Kannada News | Karnataka News Hubli News | News In Hubli | Local news

