Breaking News

ಪ್ರಧಾನಿ ನೋಡಲು ಜನಸಾಗರ: ಮೋದಿ ಮೇಲೆ ಹೂಮಳೆ

ಶಿವಮೊಗ್ಗದಿಂದ ಸೇನಾ ವಿಮಾನದಲ್ಲಿ  ಬೆಳಗಾವಿಯ ಸಾಂಬ್ರಾ ಏರ್​ಪೋರ್ಟ್​ ನಿಂದ ನಗರದ ಕೆಎಸ್‌ಆರ್‌ಪಿ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು, ನಂತರ ರಾಣಿ ಚನ್ನಮ್ಮನ ವೃತ್ತದಿಂದ ರೋಡ್​ಶೋ ನಡೆಸಿದರು. ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಡಿಜಿಪಿ ಅಲೋಕ್ ಕುಮಾರ್, ​ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಜಯ್ ಪಾಟೀಲ್ ಸ್ವಾಗತಿಸಿದರು

ಪೊಲೀಸ್ ಬಿಗಿ ಬಂದೋಬಸ್ತ್​ ನೊಂದಿಗೆ ಆರಂಭವಾದ ಪ್ರಧಾನಿ ಮೋದಿ ಅವರ ರೋಡ್ ಶೋ, ನಗರದ ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ್‌ ಗಲ್ಲಿ, ಶನಿಮಂದಿರ, ಕ‍ಪಿಲೇಶ್ವರ ಮಂದಿರ ಮೇಲ್ಸೇತುವೆ, ಶಿವಾಜಿ ಉದ್ಯಾನ ರಸ್ತೆ, ಹಳೆ ಪಿ.ಬಿ.ರಸ್ತೆ, ಬಿ.ಎಸ್‌.ಯಡಿಯೂರಪ್ಪ ಮಾರ್ಗವಾಗಿ ಸಂಚರಿಸಿ ವೇದಿಕೆ ತಲುಪಲಿದೆ. ಹಾದಿಯುದ್ದಕ್ಕೂ ಪ್ರಧಾನಿ ಮೇಲೆ ಹೂಮಳೆ ಸುರಿಸಲಾಯಿತು. ಪ್ರಧಾನಿಯವರನ್ನು ಕಾಣುವುದಕ್ಕಾಗಿ ಲಕ್ಷಾಂತರ ಜನರು ಮುಗಿಬಿದ್ದಿದರು. ರಸ್ತೆಯುದ್ದಕ್ಕೂ ಮೋದಿ, ಮೋದಿ ಎಂಬ ಘೋಷಣೆಗಳು ಕೇಳಿಬಂದವು .ಅನೇಕ ಮಂದಿ ‘ಹರ ಹರ ಮೋದಿ’ ಘೋಷಣೆ ಕೂಗಿದರು. ಮೋದಿ ರೋಡ್​ಶೋ ನಡೆಸುತ್ತಿರುವ ಮಾರ್ಗದುದ್ದಕ್ಕೂ ಕೇಸರಿ ಶಾಲು, ಧ್ವಜ ಹಿಡಿದುಕೊಂಡ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಜನರತ್ತ ಕೈಬೀಸುತ್ತಾ ಮೋದಿ ಮುಂದೆ ಸಾಗಿದರು.

Share News

About admin

Check Also

ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ; 6 ಮಂದಿ ಅಂದರ್, 491 ಗ್ರಾಂ ಗಾಂಜಾ ಜಪ್ತಿ!

ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ …

Leave a Reply

Your email address will not be published. Required fields are marked *