Breaking News

ಉತ್ತರ ಕನ್ನಡ

ವೇಷ ಬದಲಿಸಿ ತಲೆಮರೆಸಿಕೊಂಡ ಮಚ್ಚ್ ಮಂಜ್ಯಾ ಅರೆಸ್ಟ್..! ಖಾಕಿ ಟೀಂ ರೋಚಕ ಆಪರೇಷನ್ ಸಕ್ಸಸ್..

ಮೊಬೈಲ್ ಇಲ್ಲ… ಸುಳಿವು ಇಲ್ಲ… ಆದರೂ ಎಸ್ಕೇಪ್ ಆಗಲಿಲ್ಲ! ಮಚ್ಚ್ ಮಂಜ್ಯಾಗೆ ಖಾಕಿ ಶಾಕ್… ಗಡಿ ದಾಟಿದರೂ ತಪ್ಪಲಿಲ್ಲ..! PI ಜಯಪಾಲ ಪಾಟೀಲ ಟೀಂಗೆ ಬಿದ್ದ ಮಚ್ಚ್ ಮಂಜ್ಯಾ… ಹಳಿಯಾಳ: ಪೊಲೀಸರನ್ನೇ ಸವಾಲು ಹಾಕಿ ದರ್ಪ ಮೆರೆದಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ “ಮಚ್ಚ್ ಮಂಜ್ಯಾ” ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವೇಷ ಬದಲಿಸಿಕೊಂಡು, ಯಾವುದೇ ಮೊಬೈಲ್ ಫೋನ್ ಬಳಸದೇ, ಡಿಜಿಟಲ್ ಸುಳಿವೇ ಬಿಡದೆ ಮಹಾರಾಷ್ಟ್ರ ಗಡಿಯವರೆಗೆ ತಲೆಮರೆಸಿಕೊಂಡಿದ್ದ ಮಂಜ್ಯಾನನ್ನು …

Read More »

ಲಾಮಾ ಕೊಲೆ: ಲೋಭದ ಅಂತ್ಯ ರಕ್ತದಲ್ಲಿ..!

ಬೌದ್ಧ ಲಾಮಾ ಹತ್ಯೆ ಪ್ರಕರಣ ಬಯಲು – ಮೂವರು ಹಂತಕರು ಬಂಧನ, ಇನ್ನಿತರರಿಗಾಗಿ ಬಲೆ ಬೀಸುತಿರುವ ಪೋಲೀಸರು..! ಧಾರವಾಡ: ಶಾಂತಿಯ ಪ್ರತೀಕವಾಗಿ ಬದುಕುತ್ತಿದ್ದ ಬೌದ್ಧ ಲಾಮಾ… ಆದರೆ ಅವರ ಜೀವನದ ಕೊನೆ ಕ್ಷಣಗಳು ಭೀಕರವಾಗಿದ್ದವು. ಏಪ್ರಿಲ್ 29ರ ಆ ರಾತ್ರಿ, ಟಿಬೇಟಿಯನ್ ಕ್ಯಾಂಪ್‌ನ ತಾಶಿ ದೊಂದುಪ್ ಎಂಬ ಲಾಮಾ ಮೇಲೆ ಕಣ್ಣಿಟ್ಟಿದ್ದ ಹಂತಕರು, ಹಣದ ಲಾಲಸೆಗೆ ಬಲಿಯಾಗಿ ಭೀಕರ ಕೃತ್ಯ ಎಸಗಿದರು.. ಮಹಾರಾಷ್ಟ್ರ ಮೂಲದ ಕಬ್ಬು ಕಟಾವು ಗ್ಯಾಂಗ್—ಪ್ಲಾನ್ ಮಾಡಿದ್ದು …

Read More »

ಗರ್ಭ ಧರಿಸಿದ್ದ ಹಸು ಕಡಿದು ಮಾಂಸ ಕದ್ದ ಆರೋಪಿ ಅರೆಸ್ಟ್!!

ಇಬ್ರಾಹಿಂ ಮಹಮದ್ ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕುಕನೀರ್ ನದಿ ದಂಡೆಯ ಮೇಲೆ ಹಸು ಕಡಿದು ಗೋವಿನ ಹೊಟ್ಟೆಯೊಳಗೆ ಇದ್ದ ಕರುವನ್ನು ಚೀಲದಲ್ಲಿ ಸುತ್ತಿ ಬಿಸಾಡಲಾಗಿತ್ತು.ಗರ್ಭ ಧರಿಸಿದ್ದ ಹಸು ಕೊಂದು ಮಾಂಸ ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Read More »

ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ

ದಗದಗ ಬಿಸಿಲಿನ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ ಅಗಲಿದ್ದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ. ಉತ್ತರ ಕನ್ನಡ. ದಕ್ಷಿಣ ಕನ್ನಡ. ಉಡುಪಿ ಹಾಗೂ ದಕ್ಷಿಣ ಒಳನಾಡು , ಮಲೆನಾಡು ಭಾಗದ ಚಿಕ್ಕಮಂಗಳೂರು. ಕೊಡಗು. ಶಿವಮೊಗ್ಗ. ಹಾಸನ. ಮೈಸೂರು. ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದಲೇ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

Read More »

ಮುಂದಿನ ನಾಲ್ಕು ದಿನ ಸೇರಿ ಬೆಂಗಳೂರು ಮತ್ತು ಹಲವು ಜಿಲ್ಲೆಗಳಲ್ಲಿ ಮಳೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಗುಡುಗು ಸಿಡಿಲು ಸಮೇತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ ಎಂದು ದಕ್ಷಿಣ ಕನ್ನಡ ಹಾಸನ್ ಕೊಡುವ ಮೈಸೂರು ಜಿಲ್ಲೆಗಳ ಕೆಲವು ಕಡೆ ಆಗುವುದರಿಂದ ಕೂಡಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್ 22 ಬೆಂಗಳೂರು ಜಿಲ್ಲೆಗಳಲ್ಲಿ ಹಲೋ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ …

Read More »

ಆಳಸಮುದ್ರ ಹಾಗೂ ಒಳನಾಡು ಮೀನುಗಾರಿಕೆ ಸರಿಯಾಗಿ ಆಗದ ಕಾರಣ ಮೀನುಗಾರರು ಕೆಲಸವಿಲ್ಲದೆ ಖಾಲಿ…

ಕಾರವಾರ: ರಾಜ್ಯದಲ್ಲಿ ಎದುರಾದ ಬರಕ್ಕೆ ರೈತರು ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಬಾರದೆ ಇದೀಗ ಸರ್ಕಾರದ ಪರಿಹಾರಕ್ಕಾಗಿ ಎದುರು ನೋಡುವಂತಾಗಿದೆ. ಆದರೆ ಇದೇ ಸ್ಥಿತಿ ಇದೀಗ ಮೀನುಗಾರರಿಗೂ ಎದುರಾಗಿದ್ದು ಆಳಸಮುದ್ರ ಹಾಗೂ ಒಳನಾಡು ಮೀನುಗಾರಿಕೆ ಸರಿಯಾಗಿ ಆಗದ ಕಾರಣ ಮೀನುಗಾರರು ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ. ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ನಿರೀಕ್ಷೆಯಂತೆ ಸಮಯಕ್ಕೆ ಸರಿಯಾಗಿ ಆರಂಭವಾಗಿತ್ತು. ಆರಂಭದಲ್ಲಿ ಸ್ಥಳೀಯವಾಗಿ ಕಾರ್ಮಿಕರು ಸಿಗದ ಕಾರಣಕ್ಕೆ ಒಂದಿಷ್ಟು ಬೋಟ್‌ಗಳು ತಡವಾಗಿ ಮೀನುಗಾರಿಕೆಗೆ ತೆರಳಿದ್ದವಾದರೂ ಬಹುತೇಕರು ಉತ್ತಮ …

Read More »

ಕಾರು ಮತ್ತು ಸರ್ಕಾರಿ ಬಸ್‌ನ ನಡುವೆ ಮುಖಾಮುಖಿ ಡಿಕ್ಕಿ…

ಕಾರವಾರ: ಕಾರು ಮತ್ತು ಸರ್ಕಾರಿ ಬಸ್‌ನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲದಲ್ಲಿ ನಡೆದಿದೆ. ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್‌ ಕುಮಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿದೆ. ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ ನಾಲ್ವರು ಮಂಗಳೂರು ಮೂಲದವರಾಗಿದ್ದು, ಒಂದೇ ಕುಟುಂಬದವರು ಎಂದು ತಿಳಿದು …

Read More »

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ತಾವು ಕೂಡ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ…

ಕಾರವಾರ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿದ್ದು, ಹಂಚಿಕೆಯಾಗುವ ಟಿಕೆಟ್‌ಗಾಗಿ ಬಾರಿ ಪೈಪೋಟಿ ಕೂಡ ಶುರುವಾಗಿದೆ. ಆದರೆ ಉತ್ತರ ಕನ್ನಡದಲ್ಲಿ ಅಸ್ತಿತ್ವಕ್ಕೂ ಪರದಾಡುತ್ತಿರುವ ಜೆಡಿಎಸ್ ಪಕ್ಷದ ಮೂಲಕ ಮೈತ್ರಿ ಟಿಕೆಟ್ ಗಿಟ್ಟಿಸಿಕ್ಕೊಳ್ಳಲು ಪಕ್ಷದ ನಾಯಕರುಗಳಲ್ಲಿ ಭಾರೀ ಪೈಪೋಟಿ ಶುರುವಾಗಿದೆ.ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾದಂತೆ ಉತ್ತರಕನ್ನಡದಲ್ಲಿಯೂ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಹೆಚ್ಚಾಗಿ ಕಾಣಿಸಿಕ್ಕೊಳ್ಳುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ …

Read More »

ಪರಿಶಿಷ್ಟ ಜಾತಿಯ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದ ಶಿಕ್ಷಕಿ….

ಹಿಂದುಳಿದ ವರ್ಗಗಳಲ್ಲಿ ಬರುವ ಮೊಗೇರ ಜಾತಿಗೆ ಸೇರಿದ್ದರೂ ಪರಿಶಿಷ್ಟ ಜಾತಿಯ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿಯಡಿ ಸಹಾಯಕ ಕನ್ನಡ ಶಿಕ್ಷಕರ ಹುದ್ದೆ ಪಡೆಯಲು ಮುಂದಾಗಿದ್ದ ಆರೋಪಿ ಶಿಕ್ಷಕಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಉತ್ತರ ಕನ್ನಡದ ಭಟ್ಕಳ ತಾಲೂಕಿನ ಬೆಂಗೆರೆ ನಿವಾಸಿ ಸರಸ್ವತಿ ಪ್ರಕರಣದ ಆರೋಪಿ. ಅವರು ಸಲ್ಲಿಸಿದ್ದ ಕ್ರಿಮಿನಲ್ ಮೆಲ್ಮನವಿ ಅರ್ಜಿಯನ್ನು ನ್ಯಾ ಜೆ ಖಾಜಿ ಅವರಿದ್ದ ಏಕ ಸದಸ್ಯ ಪೀಠ ತಿರಸ್ಕರಿಸಿದೆ. ಅರ್ಜಿದಾರರು ಹಿಂದುಳಿದ …

Read More »

ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ ಜೊತೆಗೆ ಸೌರಿನ್ ಶುಗರ್ ಫ್ಯಾಕ್ಟರಿಯೂ ಕೂಡ ಸಾಲ ಮರುಪಾವತಿ ಮಾಡಿಲ್ಲ…

ಶಿರಸಿ (ಉತ್ತರಕನ್ನಡ): ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ( ಕೆಡಿಸಿಸಿ ) ನಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿ ಒಡೆತನದಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ನೀಡಿದ ಸಾಲ ಮರುಪಾವತಿ ಆಗಿಲ್ಲ ಎಂದು ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ ಜೊತೆಗೆ ಸೌರಿನ್ ಶುಗರ್ ಫ್ಯಾಕ್ಟರಿಯೂ ಕೂಡ ಸಾಲ ಮರುಪಾವತಿ ಮಾಡಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇತರರಿಗೆ …

Read More »