ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರ ಟಿಕೆಟ್ ವಿಚಾರಕ್ಕೆ, ಅವರನ್ನು ಮನವೊಲಿಕೆ ಪ್ರಯತ್ನ ಮಾಡಿದ್ದೇವೆ. ಇವತ್ತಿಗೂ ಪ್ರಯತ್ನ ನಡೆಯುತ್ತಿದೆ. ನಿನ್ನೆ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಅವರ ನಿವಾಸದ ಬಳಿ ಮಾತನಾಡಿದ ಅವರು, ಶೆಟ್ಟರ್ ಅವರು ಅತ್ಯಂತ ಅವಶ್ಯ ಇರೋ ನಾಯಕ. ನಡ್ಡಾ ಅವರಿಗೆ ಮಾತನಾಡಿದ್ದೇನೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ. ಶೆಟ್ಟರ್ ಗೆ ಟಿಕೆಟ್ ತಪ್ಪೋಕೆ ಕಾರಣ ನೀವಂತೆ ಅನ್ನೋ ಪ್ರಶ್ನೆಗೆ..?
ಇದು ಸುಳ್ಳು ವದಂತಿ, ಯಾರೂ ಅದನ್ನು ನಿರೀಕ್ಷೆ ಮಾಡಬಾರದು. ಅತ್ಯಂತ ಪ್ರಾಮಾಣಿಕವಾಗಿ ಶೆಟ್ಟರ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಹೇಳೋರು ನೂರಾರು ಹೇಳ್ತಾರೆ, ಶೆಟ್ಟರ್ ನಾವು ಆತ್ಮೀಯರು ಎಂದರು.
ಇನ್ನು ಇವತ್ತು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಒಳ್ಳೆ ಮುಹೂರ್ತ ಇರೋ ಕಾರಣ ನಾಮಪತ್ರ ಸಲ್ಲಿಸುತ್ತಿದ್ದೇನೆ. ಇವತ್ತು ಇಡಿ ದಿನ ಕ್ಷೇತ್ರದಲ್ಲಿ ಇರ್ತೀನಿ. ರಾಜ್ಯದಲ್ಲಿ ಚುನಾವಣೆ ಕಣ ಸಿದ್ಧವಾಗಿದೆ. ನಮಗೆ ಆತ್ಮವಿಶ್ವಾಸ ಇದೆ. ಸಂಪೂರ್ಣ ಬಹುಮತ ಬರತ್ತೆ ಎಂದ ಸಿಎಂ. ಉಳಿದ ಕ್ಷೇತ್ರಕ್ಕೆ ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡಲಾಗಿದೆ. 12 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಕೇಂದ್ರ ಚುನಾವಣೆ ಸಮಿತಿ ತೀರ್ಮಾನ ಮಾಡತ್ತೆವೆ ಎಂದರು.
ನೆಹರೂ ಒಲೆಕಾ ದಾಖಲೆ ಕೊಡಲಿ, ನೆಹರೂ ಒಲೆಕಾರ್ ಅದೇ ಪ್ರಕರಣದಲ್ಲಿ ಕನ್ವಿಕ್ಷನ್ ಆಗಿದೆ. ಕಾಂಗ್ರೆಸ್ ಗೆ ಶಕ್ತಿ ಇಲ್ಲ ಅನಸತ್ತೆ. ನಮ್ಮ ಗೊಂದಲ ಎರಡು ದಿನದಲ್ಲಿ ಬಗೆಹರಿಯತ್ತೆ. ಚುನಾವಣೆ ಅಂದ್ರೆ ಸವಾಲು. ನಾನು ಸೋಲ್ತಿನಿ ಅಂತ ಅವಾಗ್ಗೆ ಪತ್ರಿಕೆಯಲ್ಲಿ ಬರೆದಿದ್ರು ಏನು ಎಂಬುದನ್ನು ತೋರಿಸಿದ್ದೇನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





