Breaking News

ಕೆಎಲ್ ಇ ಸೇವೆ ಸ್ಮರಿಸಿದ ಅಮಿತ್ ಶಾ: ಯುವಕರು ಸಾಹಸದ ಮೂಲಕ ಸಾಧನೆಗೆ ಮುಂದಾಗಿ

ಹುಬ್ಬಳ್ಳಿ: ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನನ್ನ ಪುಣ್ಯ. ಇದೆ ಸಮಯದಲ್ಲಿ ಭಾರತದ ಅಮೃತ ಮಹೋತ್ಸವ ನಡೆಯುತ್ತಿದೆ. ದೇಶದಲ್ಲಿ ನಾವು ಗಟ್ಟಿಯಾಗಿ ಉಳಿದು ತೋರಿಸುವ ಸಮಯ ಇದಾಗಲಿದೆ. ಪ್ರತಿಷ್ಠಾಪಿಸಿದ 5 ಜನ ಗುರುಗಳಿಗೆ ನಾನು ಅಭಿನಂದಿಸಲು ಇಚ್ಚಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, 12ನೇ ವರ್ಷದವನಾಗಿದ್ದಾಗಲೇ ನಾನು ರಾಜಕೀಯ ಜೀವನ ಆರಂಭಿಸಿದ್ದೇನೆ. ಶಿಕ್ಷಣದ ವ್ಯಾಪರಿಕರಣ ಆಗುವ ಸಮಯದಲ್ಲಿ KLE ಇದನ್ನು ಸುಳ್ಳಾಗಿಸಿದೆ. ಬಡವರು, ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಲ್ಲಿ ಪ್ರಭಾಕರ ಕೋರೆ ಯಶಸ್ವಿಯಾಗಿದ್ದಾರೆ. ಲಾಲ ಲಜಪಾತರಾಯ್ ಅವರ ತ್ಯಾಗ ಬಲಿದಾನ, ಲಾಲ್ ಬಾಲ್ ಪಾಲ್ ಅವರ ಜಾಗೃತಿ ಅಪಾರವಾಗಿದೆ. ಇಂದು ಅವರ ಜನ್ಮದಿನ, ಹಾಗೂ ಮಾರ್ಷಲ್ ಕರಿಯಪ್ಪ ಜನ್ಮದಿನ ಕೂಡ ಹೌದು ಇವರನ್ನು ನಾನು ಸ್ಮರಿಸುತ್ತೇನೆ ಎಂದರು.

25ಕೋಟಿಯ ಒಳಾಂಗಣ ಕ್ರೀಡಾಂಗಣದ ಮೂಲಕ ಒಲಂಪಿಕ್ ಗೆ ಹೋಗುವ ಯುವಕರನ್ನ ತಯಾರು ಮಾಡುವ ವಿಶ್ವಾಸವಿದೆ. 1916 ರಲ್ಲಿ ಸಣ್ಣ ಶಾಲೆಯಿಂದ ಶುರುವಾಗಿರುವ ಕೆಎಲ್ ಇ ಇಂದು ಸಾಕಷ್ಟು ಪ್ರಮಾಣದಲ್ಲಿ ಬೆಳದಿದೆ. ಕೆಎಲ್ ಇ ವತಿಯಿಂದ 1700 ಬೆಡ್ ಮೇಲೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಇದು ಶ್ಲಾಘನೀಯ ಎಂದು ಅವರು ಹೇಳಿದರು.

ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿಂದ ಜಗತ್ತಿನ ಮೂಲೆ ಮೂಲೆಯಲ್ಲಿ ಇದ್ದಾರೆ. ಯುವಕರಿಗೆ ನಾನು ಶುಭಾಶಯ ತಿಳಿಸುತ್ತೇನೆ ಯಾಕೆಂದರೆ ಮೋದಿ ಅವರು ಯುವಕರನ್ನು ನಂಬಿದ್ದಾರೆ. 90 ವರ್ಷಗಳ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಸೇನಾನಿಗಳ ಕಥೆಯನ್ನು ಎಲ್ಲರು ಓದಿ. ಈಗ ದೇಶ ಸ್ವಾತಂತ್ರ್ಯವಾಗಿದೆ ನಮಗೆ ಪ್ರಾಣ ನೀಡುವ ಅವಶ್ಯಕತೆ ಇಲ್ಲಾ, ಆದರೆ ದೇಶಕ್ಕಾಗಿ ಜೀವನ ನಡೆಸುವ ಅವಶ್ಯಕತೆ ಇದೆ. ವಿಶ್ವದಲ್ಲಿ ಭಾರತವನ್ನು ಶ್ರೇಷ್ಠವಾಗಿ ನೋಡುವುದು ನಮ್ಮ ಶಪಥ ಅದು ಟೆಕ್ನಾಲಜಿಯಲ್ಲಿ ಕೂಡ ಇರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮೋದಿ ಕನಸಿನಂತೆ ಮುಂದಿನ ದಿನಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆ ಗುರಿ ಹೊಂದಿದ್ದೇವೆ. ಸ್ಟಾರ್ಟ್ ಅಪ್ ಗಳಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಯಾರಿಗೆ ಅರ್ಹತೆ ಇದೆ ಅವರನ್ನು ಕಟ್ಟಿ ಹಾಕಲು ಯಾರಿಗೂ ಸಾಧ್ಯವಿಲ್ಲ. ಉತ್ಪಾದನೆ ಹೆಚ್ಚಿಸುವ ಸಲುವಾಗಿ ಸಾಕಷ್ಟು ಯೋಜನೆ ತಂದಿದ್ದೇವೆ ಹೀಗಾಗಿ ನಾವು 11
ನೇ ಸ್ಥಾನಕ್ಕೆ ನಾವು ಬಂದಿದ್ದೇವೆ. ಮೊದಲು 3 ಸಾವಿರ ಅರ್ಜಿಗಳು ಸ್ಟಾರ್ಟ್ ಅಪ್ ಗೆ ಬರುತ್ತಿದ್ದವು ಆದರೆ ಈಗ 1.5 ಲಕ್ಷ ಅರ್ಜಿ ಬರುತ್ತವೆ ಎಂದರು.

ಮುದ್ರಾ ಯೋಜನೆಯಲ್ಲಿ ಸಣ್ಣ ಸಣ್ಣ ಸಾಲ ನೀಡಲಾಗಿದೆ. ಡಿಜಿಟಲ್ ಇಂಡಿಯಾ,ಖೇಲೋ ಇಂಡಿಯಾ, ಕಿಟ್ ಇಂಡಿಯಾ ಜಾರಿಯಲ್ಲಿದೆ. ಯುವಕರಿಗಾಗಿ ಮೋದಿ ಸಾಕಷ್ಟು ಅವಕಾಶ ಸೃಷ್ಟಿಸಿದ್ದಾರೆ ನೀವು ಸಾಹಸ ಮಾಡಬೇಕು. ಸಾಹಸ ಮಾಡುವರು ಯಶಸ್ವಿಯಾಗಿ ಬರುತ್ತಾರೆ. ಮೊದಲಿನಿಗಿಂತ ಹೆಚ್ಚು ಶಾಲಾ ಕಾಲೇಜ್ ಯೂನಿವರ್ಸಿಟಿ ನಾವು ತೆರದಿದ್ದೇವೆ. ವಿದೇಶಿ ವಿಶ್ವವಿದ್ಯಾಲಯಗಳಿಗೆ ದೇಶದಲ್ಲಿ ಅನುಮತಿ ನೀಡಿದ್ದೇವೆ. ಜೋಶಿ ಅವರ ಒತ್ತಡಕ್ಕೆ ಮಣಿದು ಇದೀಗ ಫಾರೆನ್ಸಿಕ್ ಸೈನ್ಸ್ ವಿಶ್ವವಿದ್ಯಾಲಯ ಧಾರವಾಡಕ್ಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಅಪರಾಧಗಳಿಗೆ ಪಾರೆನ್ಸಿಕ್ ಉಪಯೋಗ ಪಡೆಯುತ್ತಿವೆ. ಎಪಿಜೆ ಅಬ್ದುಲ್ ಕಲಾಂ ಅವರ ಪುಸ್ತಕದಲ್ಲಿ ಒಂದು ಮಾತಿದೆ. ನೀವು ನಿಮ್ಮ ಭವಿಷ್ಯ ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಅಭ್ಯಾಸ ಬದಲಿಸಬಹುದು ನೀವು ಅಭ್ಯಾಸ ಮಾಡಿದರೆ ನಿಮ್ಮ ಭವಿಷ್ಯ ಖಂಡಿತ ಬದಲಾಗುತ್ತದೆ. ಯುವಕರು ಮೋದಿ ಅವರ ಜೊತೆಗೆ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

Share News

About BigTv News

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *