ಹುಬ್ಬಳ್ಳಿ: ಬಿಗ್ ಬಾಸ್ ಖ್ಯಾತಿಯ ಕಂಟೆಸ್ಟಂಟ್, ಬಿಜೆಪಿ ಕಾರ್ಯಕರ್ತ ಪ್ರಶಾಂತ ಸಂಬರ್ಗಿ ಮಾಜಿ ಪ್ರಧಾನಿ ದೇವೆಗೌಡ್ರ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರಿಂದ ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಸ್ ಶಂಕರಣ್ಣ ಪ್ರಶಾಂತ ಸಂಬರ್ಗಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.
ಪ್ರಶಾಂತ ಸಂಬರ್ಗಿ ಮಾರ್ಚ್ 25 ರಂದು ದೇವೆಗೌಡ ಕಳ್ಳ ಅನ್ನೂದಕ್ಕೂ ಗೌಡರು ಅನ್ನೊರೆಲ್ಲ ಕಳ್ಳರೇ ಯಾಕಿರ್ತಾರೆ ಅನ್ನೊದಕ್ಕೂ ವ್ಯತ್ಯಾಸ ಇದೆ. ಮೊದಲನೆಯದ್ದಕ್ಕೆ ದೇವೇಗೌಡ್ರಯ ಕೇಸು ಹಾಕಬೇಕು, ಎರಡನೆಯದಕ್ಕೆ ಅವರ ಮಗನೋ, ಮೊಮ್ಮಗನೋ ಅಥವಾ ಗೌಡ ಕೇಸು ಹಾಕಬಹುದು ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಅವಮಾನ ಮಾಡಿ ಮಾನಹಾನಿಕರ ಪೋಸ್ಟ್ ಹಾಕಿ ತೇಜೋವಧೆ ಮಾಡಿರುತ್ತಾನೆಂದು ಜೆಡಿಎಸ್ ಕಾರ್ಯಕರ್ತರು ಸೈಬರ್ ಕ್ರೈಂ ಗೆ ದೂರು ನೀಡಿದ್ದರು. ಇದನ್ನು ಕಂಡ ಪ್ರಶಾಂತ ಸಂಬರ್ಗಿ ಕ್ಷಮೆ ಕೂಡ ಕೇಳಿದ್ದಾರೆ. ಕುದ್ದ ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಸ್ ಶಂಕರಣ್ಣ ಅವರು ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ..



bigtvnews | Hubli Dharwad News | Kannada News | Karnataka News Hubli News | News In Hubli | Local news





