ಹುಬ್ಬಳ್ಳಿ : ಚುನಾವಣೆ ಹೊಸ್ತಿಲಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಯ ಕಚೇರಿಯಲ್ಲಿ ಯಾವುದೇ ಅಧಿಕೃತ ಚರ್ಚೆ ಆಗಿಲ್ಲ, ಔಪಚಾರಿಕವಾಗಿ ಚರ್ಚೆ ನಡೆದಿದೆ, ಒಂದು ವೇಳೆ ಚರ್ಚೆ ಆಗಿದ್ದರೆ ನಾನು ಹೊಗುತ್ತಿದ್ದೆ . ಇಲ್ಲಿ ಹಿರಿಯ ನಾಯಕರ ಕಡೆ ಗಣನೆ ಆಗುವ ಪ್ರಶ್ನೆ ಬರಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಆಪರೇಷನ್ ಹಸ್ತ ಇದು ಮಾಧ್ಯಮ ಸೃಷ್ಟಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿಲ್ಲ, ಸಿದ್ದರಾಮಯ್ಯ ನವರು ಹೇಳಿಲ್ಲ. ಇದು ಬರಿ ಗಾಳಿ ಸುದ್ದಿ, ಇದಕ್ಕೆ ಯಾವುದೇ ಅರ್ಥ ಇಲ್ಲ. ಕನಕಪುರ ಬಂಡೆ ಅಂತಾರಲ್ಲ .ಕನಕಪುರದ ಒಬ್ಬ ಕಾಂಗ್ರೆಸ್ ಲೀಡರ್ ಬಿಜೆಪಿಗೆ ಬರ್ತಾರ ಅಂತ ಸುಮ್ನೆ ಅಂದ್ರ ಅದು ಆಗುತ್ತಾ? ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಕೋಮಾ ಸ್ಥಿತಿಯಲ್ಲಿದೆ. ಅದಕ್ಕೆ ಜೀವ ತುಂಬವ ಪ್ರಯತ್ನ ಡಿಕೆ ಮತ್ತು ಸಿದ್ದರಾಮಯ್ಯ ಮಾಡ್ತಾ ಇದಾರೆ. ಆದ್ರೆ ಇವರೇ ಕಾಂಗ್ರೆಸ್ ಮುಗಿಸುವ ಕೆಲಸ ಮಾಡ್ತಾರೆ.
ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಶೆಟ್ಟರ್ ನರೇಂದ್ರ ಮೋದಿ , ನಡ್ಡಾ ಅಥವಾ ಗುಜರಾತ್ ಸಿಎಂ ಹೇಳಿದ್ರಾ? . ಒಂದೊಂದು ರಾಜ್ಯಕ್ಕೆ ಒಂದೊಂದು ಸ್ಟ್ರ್ಯಾಟಜಿ ಇದೆ ಅದನ್ನ ನಮ್ಮ ಪಕ್ಷ ಮಾಡುತ್ತೆ. ಕರ್ನಾಟಕದ ಸ್ಟ್ರ್ಯಟಜಿಯನ್ನ ಮುಂಬರುವ ದಿನಗಳಲ್ಲಿ ಹೇಳುತ್ತೆವೆ ಎಂದರು.