Breaking News

ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರಿಗೆ ಕ್ಷೇತ್ರ ಸಿಗುತ್ತಿಲ್ಲ- ಸಿದ್ಧರಾಮಯ್ಯನವರ ವಿರುದ್ಧ ನಿರಾಣಿ ವ್ಯಂಗ್ಯ

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ, ಸಚಿವ ಮುರಗೇಶ ನಿರಾಣಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋತರು. ಅಲ್ಲಿಂದ ಜಾತಿ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯ ಬದಾಮಿಗೆ ಬಂದಿದ್ದರು. ಬದಾಮಿಯಲ್ಲಿ ಮತ್ತೆ ಸೋಲುತ್ತೇನೆ ಎನ್ನುವ ಕಾರಣದಿಂದ ಕೋಲಾರಗೆ ಹೋಗುವ ಪ್ರಯತ್ನ ಮಾಡಿದರು. ಕೋಲಾರದಲ್ಲಿ ಸರ್ವೆ ಮಾಡಿಸಿದ ನಂತರ ಅತೀ ಹೆಚ್ಚು ಮತಗಳ ಅಂತದಿಂದ ಸೋಲ್ತಾರೆ ಅನ್ನೋದು ಗೊತ್ತಾಗಿದೆ. ಇವತ್ತು ಹೆಸರಿಗೆ ಮಾತ್ರ ವರುಣಾ ಆದ್ರೆ ಬೇರೆ ಬೇರೆ ಕ್ಷೇತ್ರ ಹುಡಕತೀದಾರೆ.

ಒಬ್ಬ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರಿಗೆ ಕ್ಷೇತ್ರ ಸಿಗುತ್ತಿಲ್ಲ‌ ಎಂದರೇ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಅಪಾರ ಅನುಭವ ಇರುವ ಸಿದ್ದರಾಮಯ್ಯನವರಿಗೆ ಕ್ಷೇತ್ರ ಇಲ್ಲ. ಅವರು ಮತ್ತೊಬ್ಬರನ್ನು ಗೆಲ್ಲಿಸಿ ಹೇಗೆ ಅಧಿಕಾರಕ್ಕೆ ತರುತ್ತಾರೆ. ಎನ್ನುವ ಬಗ್ಗೆ ಆತ್ಮಾವ ಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಮುರಗೇಶ ನಿರಾಣಿ ಮಾಜಿ ಸಿಎಂ ಸಿದ್ಧರಾಮಯ್ಯನವರ ವಿರುದ್ಧ ವ್ಯಂಗ್ಯವಾಡಿದರು.

ಅವರು ಘೋಷಣೆ ಮಾಡಿರುವ ಗ್ಯಾರಂಟಿ ಯಾವುದೂ ಆಗಲ್ಲ. ನಮ್ಮ ಸರ್ಕಾರ ಏನ ಹೇಳತ್ತದೆ ಅದನ್ನು ಮಾಡುತ್ತದೆ. ಕಾಂಗ್ರೆಸ್ ಹಾಗಲ್ಲ ಬೇರೆಯವರು ಕೊಟ್ಟಿರೋದಕ್ಕೆ ಲೇಬಲ್ ಹಚ್ಚುತ್ತಾರೆ ಎಂದು ಅವರು ಹೇಳಿದರು.ನಾವು 140 ಕ್ಜೂ ಹೆಚ್ಚು ಸೀಟ್ ಗೆಲ್ಲುತ್ತೇವೆ. ಜನ ಬಿಜೆಪಿಗೆ ಆಶೀರ್ವಾದ ಮಾಡ್ತಾರೆ ಎಂದ ಅವರು, ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರಾಗಿದ್ದಾರೆ.

ನಮ್ಮ ದೇಶದ ಸಮಸ್ಯೆ ಇಲ್ಲಿ ಮಾತಾಡಬೇಕು.ಆದರೆ ರಾಹುಲ್ ಗಾಂಧಿ ಅವರು ಬೇರೆ ದೇಶದಲ್ಲಿ ಮಾತನಾಡುತ್ತಾರೆ ಅಂದರೆ ಅವರ ಬದ್ದತೆ ಏನೂ. ರಾಹುಲ್ ಗಾಂಧಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ನಿರಾಣಿ ಹೇಳಿದರು.

Share News

About BigTv News

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *