Breaking News

ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ, ಪರಿಶೀಲನೆ

ಹುಬ್ಬಳ್ಳಿ: ಜನವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಇಂದು ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈಗಾಗಲೇ ಪ್ರಧಾನಮಂತ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಪ್ರಹ್ಲಾದ್ ಜೋಶಿಯವರ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.

ಪ್ರಧಾನಿಯವರು ಕಾರ್ಯಕ್ರಮಕ್ಕೆ ಆಗಮಿಸುವ ಕುರಿತಂತೆ ಪ್ರಧಾನಿಯವರ ಕಚೇರಿಯಿಂದ ಯಾವುದೇ ಅಂತಿಮ ಸೂಚನೆಗಳು ಬಂದಿರುವುದಿಲ್ಲ. ಕಾರ್ಯಕ್ರಮದ ವೇಳೆಯು ಸಹ ಅಂತಿಮವಾಗಿರುವುದಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮದ ಭದ್ರತೆ, ಸುರಕ್ಷತಾ ಕ್ರಮಗಳು, ಸಾರಿಗೆ ಸೇರಿದಂತೆ ಇತರ ಅಗತ್ಯತೆಗಳ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರಮನ್ ಗುಪ್ತಾ ಮಾತನಾಡಿ, ಜನವರಿ 12 ರಂದು ಪ್ರಧಾನಮಂತ್ರಿ ನಗರಕ್ಕೆ ಆಗಮಿಸುತ್ತಿದ್ದಾರೆ. ಅವರ ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ಜೊತೆಗೆ ಸಹಾಯ ಸಹಕಾರದಿಂದ ನಡೆದುಕೊಳ್ಳಬೇಕು. ಕಾರ್ಯಕ್ರಮದ ಯಶಸ್ವಿಗೆ ಕಾರಣಿಭೂತರಾಗಬೇಕಾಗಿದೆ ಎಂದರು.

Share News

About BigTv News

Check Also

SSLC PUC ಉದ್ಯೋಗ ಸುದ್ದಿ

ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ, ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಮತ್ತು ಜಾನುವಾರು …

Leave a Reply

Your email address will not be published. Required fields are marked *

You cannot copy content of this page