Breaking News

ಹಿರಿಯ ಪತ್ರಕರ್ತನ ಬಂಧನ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದಿಂದಪ್ರತಿಭಟನೆ

ಧಾರವಾಡ: ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಪತ್ರಕರ್ತ ಮೆಹಬೂಬ ಮುನವಳ್ಳಿ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕರಾದ ಲಕ್ಷ್ಮಣ್. ದೊಡ್ಡಮನಿ ಮಾತನಾಡಿ ಪ್ರಜಾಪ್ರಭುತ್ವದ ಪ್ರಬಲ ಅಂಗವಾದ ಪತ್ರಿಕಾ ಮಾಧ್ಯಮ ವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ದಾವಣಗೆರೆ ಪೊಲೀಸರ ವರ್ತನೆಯನ್ನ ಖಂಡಿಸಿದವರು ಕೂಡಲೇ ಮೆಹಬೂಬ ಮುನವಳಿಯನ್ನ ಬಿಡುಗಡೆಗೊಳಿಸಬೇಕು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮವಾಗಬೇಕು ಇಲ್ಲವಾದರೆ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಹಿರಿಯ ಪತ್ರಕರ್ತರಾದ ಬಸವರಾಜ್ ಆನೇಗುಂದಿ ಮಾತನಾಡಿ, ತನಿಕಾ ಪತ್ರಿಕೋದ್ಯಮದಲ್ಲಿ ಅಪರಾಧ ಸುದ್ದಿಯನ್ನು ಮಾಡುವಾಗ ಸತ್ಯಾಸತತೆ ಅರಿಯಲು ಕೆಲವರಿಗೆ ಫೋನ್ ಮಾಡುವುದು ಅನಿವಾರ್ಯವಾಗಿ ರುತ್ತದೆ ಅದನ್ನೇ ನೆಪ ಮಾಡಿಕೊಂಡ ದಾವಣಗೇರಿ ಪೊಲೀಸರು ಉದ್ದೇಶ ಪೂರ್ವಕವಾಗಿ ಮೆಹಬೂಬ ಮುನವಳ್ಳಿ ಬಂಧನ ಮಾಡಿದ್ದಾರೆ. ಹೀಗಾಗಿ ಪ್ರಕರಣದ ಕುರಿತು ಸಿಐಡಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಲಕ್ಷ್ಮಣ್ ದೊಡ್ಡಮನಿ ಮಾತನಾಡಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಪತ್ರಕರ್ತ ಮೆಹಬೂಬ ಮುನವಳ್ಳಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರನ್ನು ಬಲಿಪಶು ಮಾಡುವ ಉನ್ನಾರ ಸರಿಯಾದ ಕ್ರಮವಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಈ ಪ್ರತಿಭಟನೆಯಲ್ಲಿ ಅಶೋಕ್ ಬಂಡಾರಿ. ದಿವಾನ್ ಬಳ್ಳಾರಿ. ಸುರೇಶ್ ಜಾದವ್. ಎಂ ಕೆ ನದಾಫ್. ನಾರಾಯಣ ಮಾದರ್. ಹನುಮಂತ ಮೊರಬ್. ಶಬೀರ್ ಹತ್ತಾರ್. ಪಚ್ಚಯ್ಯ ಹಿರೇಮಠ್. ಕಿಶೋರ್ ಕಟ್ಟಿ. ಶ್ರೀಕಾಂತ್. ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.

Share News

About BigTv News

Check Also

Featured Video Play Icon

ಚುನಾವಣೆ ಗೆದ್ದ ಬಳಿಕ ಗೆಲುವಿನ ಹರ್ಷದೊಂದಿಗೆ ಹುಬ್ಬಳ್ಳಿಗೆ ಬಂದ ಶೆಟ್ಟರ್: ಸಿದ್ಧಾರೂಢರ ದರ್ಶನ..!

ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಚುನಾವಣೆ ಗೆದ್ದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ಆರಾಧ್ಯ …

Leave a Reply

Your email address will not be published. Required fields are marked *

You cannot copy content of this page