Breaking News

ಅಧಿಕಾರ ಶಾಶ್ವತವಲ್ಲ ನಿಮ್ಮ ಹೃದಯದಲ್ಲಿರುವ ಜಾಗ ಶಾಶ್ವತ: ಸಿಎಂ

ಹುಬ್ಬಳ್ಳಿ: ಸ್ಥಾನಮಾನ ಶಾಶ್ವತವಲ್ಲ. ನಿಮ್ಮ ಹೃದಯದಲ್ಲಿ ಒಂದು ಸ್ಥಾನವನ್ನು ಮಾಡಿದ್ದೇನೆ ಅದೇ ನನಗೆ ಶಾಶ್ವತ. ಕೋಟಿಗಟ್ಟಲೆ ನಮ್ಮ ಬಂಧುಗಳಿದ್ದಾರೆ. ನಿಮಗೆ ಒಂದು ಅಳಿಲು ಸೇವೆಯನ್ನು ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರ ಭಾವುಕವಾಗಿ ನುಡಿದಿದ್ದಾರೆ.

ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಐದು ವರ್ಷ ಬಾವಿಯಲ್ಲಿ ಇಳಿದು ಚುನಾವಣೆ ಬಂದಾಗ ಮಾತ್ರ ಮೇಲೆ ಬರುವುದು ಚುನಾವಣೆ ಮುಗಿಸಿ ಬಾವಿ ಸೇರುವುದನ್ನು ಕಾಂಗ್ರೆಸ್ ಮಾಡಿದೆ. ವಂಚನೆ ಮಾಡುವ ಆಟವನ್ನು ಕಾಂಗ್ರೆಸ್ ಮಾಡುತ್ತಿದೆ ಎಚ್ಚರಿಕೆ ಇರಲಿ. ಸಮಾಜವನ್ನು ಒಡೆದು ಆಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಒಡೆಯುವ ಕಾರ್ಯವನ್ನು ಮಾಡಿದ್ದಾರೆ. ಯಾರಿಗೂ ಯಾವುದೇ ಒಂದು ಅವಕಾಶಗಳನ್ನು ನೀಡದೇ ಒಡೆದು ಆಳುವ ನೀತಿಯನ್ನು ಅನುಸರಿಸಿದರು. 2016ರಲ್ಲಿ ನಿರೀಕ್ಷೆಯಿಂದ ನೆಹರೂ ಮೈದಾನದಲ್ಲಿ ಜನರು ಸೇರಿದ್ದರು. ಆದರೆ ಸಿದ್ಧರಾಮಯ್ಯನವರು ವೇಗವಾಗಿ ಬಂದು ದೀಪ ಹಚ್ಚಿ ಅದೇ ದಾರಿಯಲ್ಲಿ ಹೋದರು ಎಂದರು.

Share News

About BigTv News

Check Also

ಪೋಕ್ಸೊ ಆರೋಪಿ ಠಾಣೆಯಿಂದ ಎಸ್ಕೇಪ್ ಪ್ರಕರಣ, ಮೂವರು ಸಿಬ್ಬಂದಿ ಅಮಾನತು

ಠಾಣೆಯಿಂದ ಪೋಕ್ಸೊ ಆರೋಪಿ ಎಸ್ಕೇಪ್: ನಿರ್ಲಕ್ಷ್ಯಕ್ಕೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..! ಪೊಲೀಸರ ನಿದ್ರೆಗೆ ಆರೋಪಿ ಪರಾರಿ: ಕಲಬುರಗಿಯಲ್ಲಿ ಮೂವರಿಗೆ …

Leave a Reply

Your email address will not be published. Required fields are marked *