ಹುಬ್ಬಳ್ಳಿ: ಬಿಜೆಪಿಯನ್ನು ಭದ್ರಗೋಳಿಸಲು ಆಯೋಜಿಸಲಾಗಿದ್ದ ಸಂವಾದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಂಡಾಡಿದ್ದಾರೆ.
ಮೋದಿಯವರ ನೇತ್ರತ್ವದಲ್ಲಿ ದೇಶ ಒಂದು ದೀರ್ಘ ನೆಗೆತ ಕಂಡಿದೆ. ಕಾಂಗ್ರೆಸ್ ಎಪ್ಪತ್ತು ವರ್ಷದಲ್ಲಿ ಸಮಾಜವನ್ನು ಒಡೆದಿದೆ. ಸಮಾಜ ಒಡೆಯುತ್ತಾ ಒಡೆಯುತ್ತಾ ತಾವೇ ಒಡೆದು ಹೋಗಿದ್ದಾರೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಒಡೆದು ಹೋಗಿದ್ದಾರೆ. ಕಾಂಗ್ರೆಸ್‌ನವರು ಕರ್ನಾಟಕದಲ್ಲೂ ವಿಭಜನೆಯಾಗಿದ್ದಾರೆ ಎಂದರು.
ಪ್ರಧಾನಿಗಳು ಎಲ್ಲರನ್ನೂ ಒಗ್ಗಟ್ಟಾಗಿ, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾರತದ ರಾಜಕೀಯದ ಸಂಸ್ಕೃತಿಯನ್ನು ಮೋದಿಯವರು ಬದಲಿಸಿದ್ದಾರೆ. ಬಡವರು, ಆದಿವಾಸಿಗಳಿಗೆ ಪದ್ಮ ಪ್ರಶಸ್ತಿ ಸಿಗುತ್ತಿದೆ ಇದು ಮೋದಿ ನೇತೃತ್ವದ ಆಡಳಿತ ಎಂದು ಅವರು ಅಭಿನಂದನೆ ಸಲ್ಲಿಸಿದರು.
ಇನ್ನೂ ಸಂವಾದದಲ್ಲಿ ವ್ಯಕ್ತಿಯೊಬ್ಬರು 16 ಪಾಲಿಕೆ ಸದಸ್ಯರ ಸಾಮೂಹಿಕ ರಾಜೀನಾಮೆ ವಿಚಾರ ಪ್ರಸ್ತಾಪ ಮಾಡಿ, ನಿಮ್ಮದು ಶಿಸ್ತಿನ ಪಕ್ಷ ಅಂತ ಹೇಳ್ತೀರಿ. ಅವರ ಮೇಲೆ ಏನು ಕ್ರಮ ಕೈಗೊಳ್ತೀರಿ..? ಎಂದು ಪ್ರಶ್ನಿಸಿದ್ದಾರೆ. ಇದು ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿಯೆ ಕ್ರಮ ಕೈಗೊಳ್ತೇವೆ. ಅವರು ಕಾಂಗ್ರೆಸ್ ಗೆ ಹೋಗಿದ್ದಾರೆ. ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ
ಪರೋಕ್ಷವಾಗಿ ಶೆಟ್ಟರ್ ಗೆ ಟಿಕೇಟ್ ಕೊಡದೇ ಇರೋದನ್ನು ಜೆ.ಪಿ.ನಡ್ಡಾ ಸಮರ್ಥಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





