Breaking News

ವಿಶ್ವದರ್ಜೆಯ ಪ್ಲಾಟ್ ಫಾರಂ ಉದ್ಘಾಟಿಸಿದ ಪ್ರಧಾನಿ ಮೋದಿ

ಧಾರವಾಡ: ವಿಶ್ವದರ್ಜೆಯ ಪ್ಲಾಟ್ ಫಾರಂ ಆಗಿ ಹೊರ ಹೊಮ್ಮಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ಪ್ಲಾಟ್ ಫಾರಂ ಅನ್ನು ಅಧಿಕೃತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡದ ಐಐಟಿ ಲೋಕಾರ್ಪಣೆಗೆ ಆಗಮಿಸಿದ ಬೆನ್ನಲ್ಲೇ ವರ್ಚುವಲ್ ಮೂಲಕ ಹುಬ್ಬಳ್ಳಿಯಲ್ಲಿರುವ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ದಾರೆ. ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇದಕ್ಕೂ ಮುನ್ನ 1ನೇ ಪ್ಲಾಟ್‌ಫಾರಂ 550 ಮೀಟರ್ ಉದ್ದ ಹೊಂದಿತ್ತು. ಇದೀಗ ಈ ಪ್ಲಾಟ್‌ಫಾರಂನ್ನು ವಿಸ್ತರಿಸಿ 10 ಮೀಟರ್ ಅಗಲದೊಂದಿಗೆ 1,505 ಮೀಟರ್‌ಗೆ ವಿಸ್ತರಣೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಈ ಹೊಸ ರೈಲು ಪ್ಲಾಟ್‌ಫಾರಂ ಲೋಕಾರ್ಪಣೆ ಮಾಡಿದ ನಂತರ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಲಿದೆ.

ಐಐಟಿ ಕ್ಯಾಂಪಸ್‌ನಿಂದಲೇ ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಲೋಕಾರ್ಪಣೆಯನ್ನು ಸಾಂಕೇತಿಕವಾಗಿ ಮಾಡಿದ್ದಾರೆ. ವಿಶ್ವದ ಅತೀ ಉದ್ದದ ವೇದಿಕೆ ಎರಡು ವರ್ಷಗಳ ಹಿಂದೆ ಉದ್ಘಾಟನೆಗೆ ಸಿದ್ಧವಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಭೇಟಿ ನೀಡಿದರೂ ಈ ಪ್ಲಾಟ್‌ಫಾರಂ ಉದ್ಘಾಟನೆ ಮಾಡಿರಲಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ಪ್ಲಾಟ್‌ಫಾರಂ ಉದ್ಘಾಟನೆ ಮಾಡಿದ್ದಾರೆ.

Share News

About BigTv News

Check Also

ಚಿಕನ್ ಪೀಸ್‌ಗಾಗಿ ಕಿರಿಕ್… ಮದ್ಯದ ನಶೆಯಲ್ಲಿ ಗೆಳೆಯನನ್ನೇ ಮುಗಿಸಿದ! ಒಂದು ತುಂಡಿನ ಜಗಳಕ್ಕೆ ರಕ್ತದೋಕುಳಿ!

ಚಿಕನ್ ಪೀಸ್‌ಗಾಗಿ ಗೆಳೆಯನ ಕಗ್ಗೊಲೆ! ಎಣ್ಣೆ ಏಟಿನಲ್ಲಿ ಎದೆಗೆ ಚಾಕು… ಕೊಲೆ ಮುಚ್ಚಲು ಕಟ್ಟುಕಥೆ ಕಟ್ಟಿದ ಆರೋಪಿ ಅರೆಸ್ಟ್! ಬೆಳಗಾವಿ: …

Leave a Reply

Your email address will not be published. Required fields are marked *