Breaking News

ಇಂದು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ಮೋದಿ ಆಗಮನ

ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 3.40 ಹುಬ್ಬಳ್ಳಿ ಏರಪೋರ್ಟ್ ಗೆ ಆಗಮಿಸಲಿರೋ ಮೋದಿ ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ನಡೆಯುತ್ತಿರೋ ಕಾರ್ಯಕ್ರಮಕ್ಕೆ ಸಂಜೆ ನಾಲ್ಕು ಗಂಟೆಗೆ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮೋದಿಯನ್ನ ಸ್ವಾಗತ ಮಾಡಲು ಕೇಂದ್ರ ಜೋಶಿ ಪ್ರಲ್ಹಾದ್ ಜೋಶಿ,ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಬಿಜೆಪಿ ರಾಜ್ಯದ್ಯಕ್ಷ ನಳೀನಕುಮಾರ್ ಕಟೀಲು ಸಕಲ ಸಿದ್ದತೆ ನಡೆಸಿದ್ದಾರೆ.  ಹುಬ್ಬಳ್ಳಿ ಏರಪೋರ್ಟ್ ನಿಂದ ನೆಹರು ಮೈದಾನದ ವರೆಗೂ 3.45 ರಿಂದ 4 ಗಂಟೆವರೆಗೂ ರೋಡ್ ಶೋ ಸಾಧ್ಯತೆ ಇದೆ. ಹಾಗೂ ಒಟ್ಟು ಎಂಟು ಕಿಲೋ ಮೀಟರ್ ರಸ್ತೆ ಮಾರ್ಗವಾಗಿ ಬರಲಿರೋ ಮೋದಿ, ಒಂದು ಕಿಲೋ ಮೀಟರ್ ಗೆ ಒಂದು ಕಡೆ ವಾಹನ ನಿಲ್ಲಿಸಿ ಜನರನ್ನು ಮಾತನಾಡಿಸೋ ಸಾಧ್ಯತೆ ಇದೆ ಎನ್ನಲಾಗಿದೆ.

ಏರಪೋರ್ಟ್ ನಿಂದ ಅಕ್ಷಯ್ ಪಾರ್ಕ್ ,ಗೋಕುಲ್ ರೋಡ್,ಹೊಸುರ್ ಸರ್ಕಲ್,ಭಗತ್ ಸಿಂಗ್ ಸರ್ಕಲ್,ದೇಶಪಾಂಡೆ ನಗರ,ಕೋರ್ಟ್ ಸರ್ಕಲ್ ಮಾರ್ಗವಾಗಿ ರೇಲ್ವೆ ಮೈದಾನಕ್ಕೆ ಎಂಟ್ರಿಯಾಗಲಿರೋ ಮೋದಿ 5.15 ಕಾರ್ಯಕ್ರಮ ಮುಕ್ತಾಯ ಮಾಡಿ, 5.35 ಕ್ಕೆ ಹುಬ್ಬಳ್ಳಿ ಏರಪೋರ್ಟ್ ನಿಂದ ದೆಹಲಿಗೆ ಪ್ರಯಾಣಿಸಲಿದ್ದಾರೆ.

Share News

About BigTv News

Check Also

ನಕಲಿ ಸಿಗರೇಟ್​ ಮಾರಾಟ

ಚಿಂತಾಮಣಿ: ನಗರದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ನಕಲಿ ಸಿಗರೇಟ್​ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ಕಂಪನಿ ಬ್ರ್ಯಾಂಡ್​ ಪ್ರೊಟೆಕ್ಷನ್​ ಅಧಿಕಾರಿಗಳು, …

Leave a Reply

Your email address will not be published. Required fields are marked *