ಹುಬ್ಬಳ್ಳಿ: ರಾಣಿ ಚೆನ್ನಮ್ಮ ಈದ್ಗಾ ಮೈದಾನಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಮಾತನಾಡಿದ್ದಾರೆ. ಪಾಲಿಕೆಗೆ ಹೋಳಿ ಹುಣ್ಣಿಮೆ ಪ್ರಯುಕ್ತ ಕಾಮಣ್ಣನ ಪ್ರತಿಷ್ಠಾಪನೆ ಮಾಡಲು ಗಜಾನನ ಉತ್ಸವ ಮಹಾಮಂಡಳಿಯಿಂದ ಮನವಿಯನ್ನಾ ಕೊಟ್ಟಿದ್ರು. ಸೂಕ್ತ ಬಂದೋಬಸ್ತ ಕಲ್ಪಿಸಲು ಆಗದ ಕಾರಣ ನಾವು ಅನುಮತಿ ಕೊಟ್ಟಿಲ್ಲ. ಮೋದಿ ಅವರು IIT ಉದ್ಘಾಟನೆಗೆ ಬರಲಿದ್ದಾರೆ. ಮೋದಿ ಕಾರ್ಯಕ್ರಮ ಬಂದೋಬಸ್ತ್ ಗಾಗಿ ಪೊಲೀಸ್ ಸಿಬ್ದಂದಿ ಧಾರವಾಡಕ್ಕೆ ಹೋಗ್ತಾರೆ. ಈ ಕಾರಣಕ್ಕೆ ಪೊಲೀಸ್ ಬಂದೋಬಸ್ತ್ ಕೊಡೋದು ಕಷ್ಟ. ಮೋದಿ ಬರೋ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಅರ್ಜಿಯನ್ನು ಪರಿಗಣಿಸಿಲ್ಲ. ಮೇಯರ್ ಅವರು ಸದಸ್ಯರೊಂದಿಗೆ ಚರ್ಚೆ ಮಾಡಿ ಅವರ ನಿಲುವು ಹೇಳಿದ್ದಾರೆ. ಆದ್ರೆ ಅಂತಿಮವಾಗಿ ಆಯುಕ್ತರೇ ಅನುಮತಿ ಕೊಡಬೇಕಾದವರು. ನಾವು ಈಗಾಗಲೇ ಆಯೋಜಕರನ್ನು ಕರೆದು ಹೇಳಿದ್ದೇವೆ. ಅಲ್ಲದೆ ಮನವಿ ತಡವಾಗಿ ಕೊಟ್ಟಿರೋದ್ರಿಂದ ಪರಿಗಣಿಸಲಾಗಿಲ್ಲ. ನನಗೆ ಯಾವುದೇ ರಾಜಕೀಯ ನಾಯಕರು ಒತ್ತಡ ಹಾಕಿಲ್ಲ ಎಂದು ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

