ಧಾರವಾಡ : ಮಕ್ಕಳು ಆಟೋಟದಲ್ಲಿ ಸ್ವಚ್ಛತೆ ಬಗ್ಗೆ ಗಮನ ನೀಡದೆ ಇರುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮಹತ್ವದ್ದಾಗಿದೆ ಎಂದು ಎಂದು ರೆಡ್ ಕ್ರಾಸ ಸಂಸ್ಥೆಯ ಕಾರ್ಯದರ್ಶಿ ಡಾ.ಉಮೇಶ ಹಳ್ಳಿಕೇರಿ ಹೇಳಿದರು.
ಅವರು ಚಂದ್ರಸ್ಪೂರ್ತಿ ಮತ್ತು ರಂಗತೋರಣ ಹಾಗೂ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕ್ಯಾನ್ಸರ್ ಆಸ್ಪತ್ರೆ ನವನಗರದ ವತಿಯಿಂದ ಧಾರವಾಡ ರಂಗಾಯಣದ ಮಣ್ಣಿನ ಹೆಜ್ಜೆ ಮಕ್ಕಳ ಶಿಬಿರದ ಮಕ್ಕಳಿಗೆ ಆರೋಗ್ಯ ಮತ್ತು ಸ್ವಚ್ಚತಾ ಕ್ರಮಗಳ ಕುರಿತು ಮಾಹಿತಿ ನೀಡುತ್ತಾ ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು. ಶೌಚಾಲಯ ಬಳಕೆ ಮತ್ತು ಶೌಚದ ಬಳಿಕ ಸ್ವಚ್ಛವಾಗಿ ಕೈ ತೊಳೆಯುವದರ ಬಗ್ಗೆ ಹೇಳಿಕೊಡಬೇಕು. ಅದರಂತೆ ಊಟದ ಮೊದಲು ಕೃ ಕಾಲು ತೊಳೆಯುವದು ಅತೀ ಅವಶ್ಯಕ ಇದರಿಂದ ಉಂಟಾಗುವ ಕಾಯಿಲೆಗಳು ಮತ್ತು ಇತರೆ ಕಾಯಿಲೆಗಳು ಮಕ್ಕಳತ್ತ ಸುಳಿಯುವದಿಲ್ಲ ಎಂದು ಹೇಳಿದರು. ಮುಖ್ಯ ಅತಿಥಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ ಪ್ರಾಣಿಗಳಿಂದ ಉಂಟಾಗುವ ಖಾಯಿಲೆ ಮತ್ತು ಅದರಿಂದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ವೀರಾಪೂರ ಮಾತನಾಡಿ ರೆಡ್ ಕ್ರಾಸ ನಡೆದು ಬಂದ ಹಾದಿ, ಅದರ ಉದ್ದೇಶ, ಕಾರ್ಯಚಟುವಟಿಕೆಗಳ ಹಾಗೂ ತುರ್ತು ಸಂದರ್ಭದಲ್ಲಿ ಅಂಬ್ಯುಲೇನ್ಸ್ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ ಸಂಸ್ಥೆಯ ಕೋಶಾಧ್ಯಕ್ಷ ಎಸ್ ಜಿ.ಹಿರೇಮಠ, ಶಿಬಿರದ ಸಹ ಸಂಚಾಲಕ ವಿಜಯ ದೊಡಮನಿ ವೇದಿಕೆಯಲ್ಲಿ ಇದ್ದರು. ಅಲ್ಲದೇ ಶಿಬಿರದ ನಿರ್ದೇಶಕರಾದ ವಿಜಯ್ ಕುಮಾರ್ ಪಟ್ಯಾಳ, ಮಹಾಂತೇಶ್ .ಜಿ.ಟಿ, ಆಕಾಶ್, ಶ್ರೀಶೈಲ್, ಪ್ರಜ್ಞಾ ಮತ್ತು ಸಹ ನಿರ್ದೇಶಕರಾದ ಸಿಂಧೂ, ಮಹೇಶ್ ಪಟ್ಟಿಹಾಳ್, ಚೇತನ್ ಚಲವಾದಿ, ಸಾಗರ್ ದನದಮನಿ , ಸುನಿಲ್, ಸಂಗಮೇಶ್, ವಿನುತಾ ಹಾಗೂ ಮಕ್ಕಳು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





