Breaking News

ಡಿಕೆ ಶಿವಕುಮಾರ್​ ಅವರ ಆಡಿಯೋ ರಿಲೀಸ್

ಬೆಳಗಾವಿ:  ಸಾಹುಕಾರ್, ಡಿಕೆ ಶಿವಕುಮಾರ್​ ಅವರ ಆಡಿಯೋ ರಿಲೀಸ್ ಮಾಡಿದ್ದು,  ಡಿಕೆಶಿ ಅವ್ರದ್ದೆನ್ನಲಾದ 18 ಸೆಕೆಂಡ್​ಗಳ ಆಡಿಯೋ ಇದಾಗಿದೆ. ರಮೇಶ್​ ಜಾರಕಿಹೊಳಿಯಿಂದ ಸ್ಫೋಟಕ ಆಡಿಯೋ ರಿಲೀಸ್​​ ಆಗಿದ್ದು, ಡಿಕೆಶಿ ಆಡಿಯೋದಲ್ಲಿ  ನನಗೆ ದುಬೈನಲ್ಲಿ ಮನೆ.. ಲಂಡನ್​​​​​ನಲ್ಲೂ ಮನೆ ಇದೆ. ದೆಹಲಿಯಲ್ಲೊಂದು ಮನೆ ತಗೊಂಡು ಇಟ್ಟಕೊಂಡಿದ್ದೀನಿ.  ಮುಂಬೈನಲ್ಲೂ ಒಂದು ಫ್ಲಾಟ್​​​ ಇದೆ ಎಂದಿದ್ದಾರೆ. ಆಡಿಯೋದಲ್ಲಿ ಕೋಟಿ ಕೋಟಿ ವ್ಯವಹಾರದ ಪ್ರಸ್ತಾಪ ಮಾಡಿದ್ದಾರೆ. ರೇಡ್​ ಆದಾಗ 40-50 ಕೋಟಿ ಸೀಜ್ ಆಗಿತ್ತು ಎಂದಿದ್ದಾರೆ. ಡಿ.ಕೆ.ಶಿವಕುಮಾರ್​​ ವಿರುದ್ಧ ಜಾರಕಿಹೊಳಿ ಸ್ಫೋಟಕ ಹೇಳಿಕೆ ಕೊಟ್ಟಿದ್ದು, ಡಿಕೆಶಿ ಗರ್ಲ್​​ ಫ್ರೆಂಡ್​ ಮನೆ ಲಂಡನ್​​ನಲ್ಲಿ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.  ಶುಗರ್​ ಫ್ಯಾಕ್ಟರಿಯಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ. ಹೆಬ್ಬಾಳ್ಕರ್​​ ಶುಗರ್​​ ಫ್ಯಾಕ್ಟರಿಯಲ್ಲಿ ಡಿಕೆಶಿ ಬ್ಲಾಕ್​​ಮನಿ ಇದೆ, ಕೋ-ಆಪರೇಟೀವ್​ ಬ್ಯಾಂಕ್​​ನಲ್ಲಿ ಕೋಟ್ಯಂತರ ಅವ್ಯವಹಾರ ಆಗಿದೆ. ನನ್ನ ವಿರುದ್ಧ 40 ಕೋಟಿ ಖರ್ಚು ಮಾಡಿ CD ಷಡ್ಯಂತ್ರ ಮಾಡಲಾಗಿದೆ. ಡಿಕೆಶಿ, CD ಲೇಡಿ ಮತ್ತು 6 ಜನರು ಅರೆಸ್ಟ್ ಆಗಬೇಕು,  ಕನಕಪುರದ ಗ್ರಾನೈಟ್​ ಉದ್ಯಮಿ, ಮಂಡ್ಯದ ಇಬ್ಬರು ನಾಯಕರು,ಕಾಂಗ್ರೆಸ್​ನ ಒಂದಿಬ್ಬರು CD ಷಡ್ಯಂತ್ರದ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ಅಂಗಡಿಯಲ್ಲೇ ಮಾಲೀಕನ ಬರ್ಬರ ಕೊಲೆ

ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಅಂಗಡಿ ಮಾಲೀಕ ರಾಜು ಸಿಂಗ್ ಅವರನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ …

Leave a Reply

Your email address will not be published. Required fields are marked *