ಹುಬ್ಬಳ್ಳಿ: ಸರ್ಕಾರದ ಆದೇಶದನ್ವಯ ಪೌರ ಕಾರ್ಮಿಕರಿಗೆ ವಿಶೇಷ ನೇರ ನೇಮಕಾತಿ ಹಾಗೂ ಪಾಲಿಕೆಯಿಂದ ನೇರ ವೇತನವನ್ನು ಪಾವತಿಸಲು ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರು ಮತ್ತು ನೌಕರರ ಸಂಘ ಧಾರವಾಡ ಇವರ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎದುರಿಗೆ ಅನಿರ್ದಧಿಷ್ಠ ಅಹೋರಾತ್ರಿ ಧರಣಿ ಸತ್ಯಾಗ್ರಹ ಆಮರಣ ಉಪವಾಸ ಹೋರಾಟ ಹಮ್ಮಿಕೊಂಡಿದ್ದಾರೆ.
ನೂರಾರು ಪೌರ ಕಾರ್ಮಿಕರು ಅವಳಿ ನಗರದಲ್ಲಿ ಸ್ವಚ್ಚತಾ ಕಾರ್ಯವನ್ನು ಬದಿಗಿಟ್ಟಿ ಪಾಲಿಕೆ ಎದುರಿಗೆ ಸತ್ಯಾಗ್ರಹ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದರು.



bigtvnews | Hubli Dharwad News | Kannada News | Karnataka News Hubli News | News In Hubli | Local news





