ಹುಬ್ಬಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೋ ಡೆವಲಪ್ಮೆಂಟ್ ನೋ ವೋಟ್ ಅಭಿಯಾನ ಆರಂಭವಾಗಿದ್ದು, ಇದು ಸ್ಮಾರ್ಟ್ ಸಿಟಿ ಅಲ್ಲಾ… ಸ್ಮಾರ್ಟ್ ಸಿಟಿ ಅನ್ನೊದು ಬರೀ ಅಧಿಕಾರಿಗಳ ಮತ್ತು ರಾಜಕಾರಣಿಗಳ ದಾಖಲೆಗಳಲ್ಲಿದೆ…
ಹುಬ್ಬಳಿಯ ಅಕ್ಷಯ್ ಕಾಲೋನಿಯ 1,2,3 ಹಂತದ ನಿವಾಸಿಗಳಿಂದ ಪಕ್ಷಾತೀತವಾಗಿ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಅಕ್ಷರವಂತರೇ ಹೆಚ್ಚಾಗಿರುವ ಈ ಕಾಲೋನಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ.
ಒಳ ಚರಂಡಿ ಇಲ್ಲ, ರಸ್ತೆಗಳಲ್ಲಿ, ಕುಡಿಯುವ ನೀರಿನ ಸೌಲಭ್ಯ ಸಹ ಇಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡೆಗೆ ಬೆಸತ್ತು ಚುನಾವಣೆ ಬಹಿಷ್ಕಾರಕ್ಕೆ ಜನ ಮುಂದಾಗಿದ್ದು, ಆಕ್ರೋಶ ಹೊರಹಾಕಿದ್ದಾರೆ. ಮೋದಿ, ರಾಹುಲ್ ಗಾಂಧಿ, ಕುಮಾರಸ್ವಾಮಿ ಎಷ್ಟು ಸಲ ಬಂದು ರೋಡ್ ಷೋ ಮಾಡಿದರು ಅಭಿವೃದ್ಧಿ ಇಲ್ಲದೆ ನಾವು ವೋಟ್ ಹಾಕಲ್ಲ ಅಂತ ನಿವಾಸಿಗಳು ಈ ನೂತನ ಅಭಿಯಾನವನ್ನು ಆರಂಭಿಸಿದ್ದಾರೆ.

bigtvnews | Hubli Dharwad News | Kannada News | Karnataka News Hubli News | News In Hubli | Local news





