Breaking News

ಕೆಲಸದಿಂದ ಸಿಬ್ಬಂದಿಯನ್ನು ತೆಗೆದು ಹಾಕಿದ ಬಿಡಿಕೆ ಕಂಪನಿ-ಕೆಲಸಾಗಾರರಿಂದ ಪ್ರತೀಭಟನೆ

ಹುಬ್ಬಳಿ : ಹುಬ್ಬಳಿ ವಿಮಾನ ನಿಲ್ದಾಣದ ಎದುರಿಗೆ ,ಸ್ವಿಮ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿ ಕಳೆದ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕೆಲಸಗಾರರು ಆಡಳಿತ ಮಂಡಳಿ ವಿರುದ್ಧ ಕೆಲಸಗಾರ ಆಕ್ರೋಶ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ರ‌್ಯಾಂಡ್ ಸ್ಟ್ಯಾಂಡ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಇವರನ್ನು ಬಿಡಿಕೆ ಕೆಲಸಕ್ಕೆ ತೆಗೆದುಕೊಂಡಿತ್ತು. ಆದರೆ ಕಳೆದ ಎರಡು ವರ್ಷಗಳಿಂದೆ ಬಿಡಿಕೆ ಏಕಾಏಕಿ 160 ಜನರಿಗೆ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಒತ್ತಡ ಹಾಕಿತ್ತು. ಅದರಂತೆ 110 ಜನ ವಿಆರ್ ಎಸ್ ತೆಗೆದುಕೊಂಡಿದ್ದು, ಇನ್ನೂ 39 ಜನ ಮಾತ್ರ ಇದನ್ನು ವಿರೋಧಿಸಿದ್ದರು. ಆಗ ಕಂಪನಿ 39 ಜನರನ್ನು ಮತ್ತೆ ವಾಪಸು ಕೆಲಸಕ್ಕೆ ಸೇರಿಸಿಕೊಳ್ಳುವ ನಾಟಕ ಮಾಡಿತ್ತು. ಇದಾದ ಕೆಲವು ತಿಂಗಳ ಹಿಂದೆ ಕಂಪನಿ ತನ್ನ ವರಸೆ ಬದಲಾಯಿಸಿದೆ. 39 ಜನರಿಗೆ ಕಾಟಾಚಾರಕ್ಕೆ ನೋಟಿಸ್ ನೀಡಿ, ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ..

ಕಂಪನಿ ಈ ನೀತಿಯ ವಿರುದ್ಧ ಕಾರ್ಮಿಕರು ಆಕ್ರೋಶಗೊಂಡು ಕಚೇರಿ ಮುಖ್ಯ ಗೆಟ್ ಬಳಿ ಅನಿರ್ದಿಷ್ಟವಾದಿ ಧರಣಿಗೆ ಮುಂದಾಗಿದ್ದಾರೆ. ಅಲ್ಲದೆ ಈ ಬಗ್ಗೆ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಜನಪ್ರತಿನಿಧಿಗಳ ಗಮನಕ್ಕೂ ಸಹ ತಂದಿದ್ದಾರೆ. ಆದರೆ ಕಂಪನಿ ಮಾತ್ರ ಕ್ಯಾರೆ ಎಂದಿಲ್ಲ. ಇನ್ನೂ ಕೆಲಸ‌ ಕಳೆದಕೊಂಡ ಕಾರ್ಮಿಕರು ಎಲ್ಲರೂ ಕಾರ್ಮಿಕ ಇಲಾಖೆಯ ಮೊರೆ ಹೋಗಿದ್ದು, ಕಾರ್ಮಿಕ ಇಲಾಖೆಯ ನ್ಯಾಯಾಲಯ ವಜಾ ಮಾಡಿರುವ ಸಿಬ್ಬಂದಿಗೆ ವಾಪಸು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಅಥವಾ ಸಿಬ್ಬಂದಿ ಕೇಳುವ ಪರಿಹಾರ ನೀಡುವಂತೆ ಸೂಚನೆ ನೀಡಿದೆ. ಆದರೆ ಕಂಪನಿ ಮಾತ್ರ ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳದೆ. ತನ್ನ ಭಂಡತವನ್ನು ಪ್ರದರ್ಶನ ಮಾಡುತ್ತಿದೆ ಎನ್ನುವುದು ಪ್ರತಿಭಟನಾಕಾರರು ಆರೋಪ.

ಈ ಹಿಂದೆ ಈ ಕಂಪನಿ ಬಹುರಾಷ್ಟ್ರೀಯ ಕಂಪನಿಯಾಗಿತ್ತು. ಆದರೆ ಸದ್ಯ ಇದನ್ನು ಸ್ಥಳೀಯ ಉದ್ಯಮಿಯೊಬ್ಬರು ನಡೆಸುತ್ತಿದ್ದು, ಬೆಕಂತಲೇ ಸ್ಥಳೀಯ ಕೆಲಸಗಾರರನ್ನು ಟಾರ್ಗೆಟ್ ಮಾಡಿ ತೆಗೆದುಹಾಕಿ, ಬೇರೆ ಬೇರೇ ರಾಜ್ಯಗಳಿಂದ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ಕರೆತರುವ ಹುನ್ನಾರ ನಡೆಸಲಾಗುತ್ತಿದೆ. ಇದೇ ಕಂಪನಿಯನ್ನು ನಂಬಿ ನಾವು ಮತ್ತು ಕುಟುಂಬದ ಜೀವನ ನಡೆಸುತ್ತಿದೆ. ಈ ಕಂಪನಿ ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದು ನಮ್ಮನ್ನು ಆರ್ಥಿಕ ಸಂಕಷ್ಟ ದೂಡಿದೆ. ವಯಸ್ಸು ಸಹ ಹೆಚ್ಚಾಗಿದ್ದು ಬೇರೆ ಕಡೆ ಕೆಲಸಕ್ಕೆ ಸಹ ಸೇರಿಸಿಕೊಳ್ಳಿಸುತ್ತಿಲ್ಲ. ನಾವು ಕಂಪನಿಗಾಗಿ ಹಗಲು ರಾತ್ರಿ ದುಡಿದಿದ್ದೆವೆ, ಅದನ್ನು ಲೆಕ್ಕಿಸದೆ ಕಂಪನಿ ಮಾಲೀಕರು ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ನಾವು ಪ್ರತಿಭಟನೆ ಮಾಡುತ್ತಿದ್ದರು ತಲೆ ಕಡೆಸಿಕೊಳ್ಳದೆ ನಿತ್ಯ ಇಲ್ಲಿಯೇ ಓಡಾಡುತ್ತಾರೆ. ಬಿಸಿಲಿನ ತಾಪ ತಾಳಲಾರದೆ ಸಾಕಷ್ಟು ಜನ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಕುಡಿಯಲು ಒಂದು ಹನಿ ನೀರು ಸಹ ನೀಡುವುದಿಲ್ಲ ಅಂತ ವಜಾಗೊಂಡ ಸಿಬ್ಬಂದಿ ತಮ್ಮ ನೋವು ಹೊರಹಾಕಿದ್ದಾರೆ..

Share News

About admin

Check Also

ಪೋಕ್ಸೊ ಆರೋಪಿ ಠಾಣೆಯಿಂದ ಎಸ್ಕೇಪ್ ಪ್ರಕರಣ, ಮೂವರು ಸಿಬ್ಬಂದಿ ಅಮಾನತು

ಠಾಣೆಯಿಂದ ಪೋಕ್ಸೊ ಆರೋಪಿ ಎಸ್ಕೇಪ್: ನಿರ್ಲಕ್ಷ್ಯಕ್ಕೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..! ಪೊಲೀಸರ ನಿದ್ರೆಗೆ ಆರೋಪಿ ಪರಾರಿ: ಕಲಬುರಗಿಯಲ್ಲಿ ಮೂವರಿಗೆ …

Leave a Reply

Your email address will not be published. Required fields are marked *