ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಈ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಳ್ಳಾವರದಲ್ಲಿ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಮಾ 11 ರಂದು ಅಳ್ಳಾವರ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಘಟಕದ ಅಧ್ಯಕ್ಷ ಡಾ:ಬಸವರಾಜ ಮೂಡಬಾಗಿಲ ಹೇಳಿದರು. ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಡಿ ಭಾಗದ ಹೊಸ ತಾಲೂಕು ಕೇಂದ್ರದಲ್ಲಿ ಕನ್ನಡತನ ಉಳಿಸಿ- ಬೆಳಸಲು ಈ ಸಮ್ಮೇಳನ ಪೂರಕ ಚಟುವಟಿಕೆ ಹಮ್ಮಿಕೊಳ್ಳಲಿದೆ ಎಂದರು. ಅಂದು ಬೆಳಿಗ್ಗೆ ವಿಶ್ಲೇಶ್ವರ ದೇವಸ್ಥಾನದಿಂದ ಕನ್ನಡ ಮೆರವಣಿಗೆ ನಡೆಸಬೇಕು. ಶೀಘ್ರವೇ ಸಮ್ಮೇಳಾನಾಧ್ಯಕ್ಷರನ್ನು ಆಯ್ಕೆಮಾಡಬೇಕು. ಉದ್ಘಾಟನಾ ಕಾರ್ಯಕ್ರಮದ ರೂಪರೇಷೆ, ಕವಿಗೋಷ್ಠಿ ಗಣ್ಯರ ಸತ್ಕಾರ ವಿವಿಧ ಸಮಿತಿಗಳ ರಚನೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಹಿರಿಯರಾದ ಎಸ್.ಬಿ.ಪಾಟೀಲ್, ಎಸ್.ಡಿ. ದೇಗಾವಿಮಠ, ಸುವರ್ಣಾ ಕಡಕೊಳ, ಜಯಶ್ರೀ ಉಡುಪಿ, ಉಪಸ್ಥಿತರಿದ್ದರು.
