ಹುಬ್ಬಳ್ಳಿ ಧಾರವಾಡ ವಾರ್ಡ್ ನಂಬರ್ 36ರಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ ಇವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಕರಪತ್ರಗಳನ್ನು ಮನೆಮನೆಗೆ ಹಂಚಲಾಯಿತು ಹಾಗೂ ಪ್ರತಿ ಮನೆಗೆ ಸ್ಟಿಕರ್ಗಳನ್ನು ಅಂಟಿಸಲಾಯಿತು ಮತ್ತು ಗೋಡೆಗಳ ಮೇಲೆ ಭಾರತೀಯ ಜನತಾ ಪಕ್ಷದ ಚಿನ್ನೆಯನ್ನು ಗೋಡೆಗಳ ಮೇಲೆ ಮನೆ ಮಾಲೀಕರ ಪರವಾನಗಿ ಪಡೆದು ಚಿತ್ರಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡಿನ ಅಧ್ಯಕ್ಷ ಬಸವರಾಜ್ ಮಾಡಳ್ಳಿ, ಕೃಷ್ಣ ಉಳವಣ್ಣವರ, ಮಂಜು ಕೋಳಿಕಾಲ್, ಮಂಜು ಮೂಡ್ಲವರ್, ಮಂಜುನಾಥ. ನ, ಮರಿಯಪ್ಪ ಹೊಸಮನಿ, ಮಂಜುನಾಥ ಡಿ.ಕೆ, ಉಮೇಶ್ ನರಗುಂದ, ಹಾಗೂ ಅನೇಕ ಯುವ ಮಿತ್ರರು ಉಪಸ್ಥಿತರಿದ್ದರು.
