ಬೆಂಗಳೂರು : ಬೆಂಗಳೂರು ಸಬ್ ಅರ್ಬನ್ ರೈಲಿಗೆ 900 ಕೋಟಿ ಘೋಷಣೆಯಾಗಿದೆ. ಕರ್ನಾಟಕಕ್ಕೆ ಹೊಸ ರೈಲು ಘೋಷಣೆಯಾಗಿದೆ.ಬೆಳಗಾವಿ-ಸೂಳದಾಳ ರೈಲ್ವೆ ಹಳಿ ಡಬ್ಲಿಂಗ್, ಬೆಂಗಳೂರಿನ ಯುನಾನಿ ಸಂಸ್ಥೆಗೆ 161 ಕೋಟಿ, ತೆಂಗು ಅಭಿವೃದ್ಧಿ ಮಂಡಳಿಗೆ 39 ಕೋಟಿ, ಬೆಂಗಳೂರಿನ IISCಗೆ 815 ಕೋಟಿ ಘೋಷಣೆಯಾಗಿದೆ. ಮೈಸೂರಿನ ಅಖಿಲಭಾರತ ವಾಕ್ ಶ್ರವಣ ಸಂಸ್ಥೆಗೆ 125 ಕೋಟಿ, ಬೆಂಗಳೂರಿನ ನಿಮ್ಹಾನ್ಸ್ಗೆ 721 ಕೋಟಿ ಘೋಷಣೆಯಾಗಿದೆ. ಬೆಂಗಳೂರಿನ ನ್ಯಾನೋ-ಸಾಫ್ಟ್ ಮ್ಯಾಟರ್ ವಿಜ್ಞಾನ ಕೇಂದ್ರಕ್ಕೆ 26 ಕೋಟಿ, ಬೆಂಗಳೂರಿನ ಭಾರತ ವಿಜ್ಞಾನ ಕೇಂದ್ರಕ್ಕೆ 7.95 ಕೋಟಿ, ಬೆಂಗಳೂರಿನ ಖಗೋಳ-ಭೌತಶಾಸ್ತ್ರಕ್ಕೆ 104.84 ಕೋಟಿ ಘೋಷಣೆಯಾಗಿದೆ, ಜವಾಹರ್ಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ 132 ಕೋಟಿ, ಸರ್.ಸಿ.ವಿ.ರಾಮನ್ ಸಂಶೋಧನಾ ಸಂಸ್ಥೆಗೆ 68 ಕೋಟಿ, ಬೆಂಗಳೂರಿನ ಸ್ಟೆಮ್ ಸೆಲ್ಸ್ ಸಂಶೋಧನಾ ಸಂಸ್ಥೆಗೆ 67 ಕೋಟಿ, ಕರ್ನಾಟಕ ಆ್ಯಂಟಿ ಬಯೋಟಿಕ್-ಫಾರ್ಮಾಸುಟಿಕಲ್ಸ್ ಸಂಸ್ಥೆಗೆ 32 ಕೋಟಿ, BELಗೆ 550 ಕೋಟಿ, HALಗೆ 2000 ಕೋಟಿ ಘೋಷಣೆಯಾಗಿದೆ.
