Breaking News

ಬಿಜೆಪಿ ಸಂಸ್ಕೃತಿ ಏನು ಗೊತ್ತಾಗಿದೆ-ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

ಹುಬ್ಬಳ್ಳಿ: ಇಂದಿನಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ ಪಂಚರತ್ನ ಯಾತ್ರೆ ಆರಂಭ  ಮಾಡುತ್ತಿರುವುದಾಗಿ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದರು. ಫೆ 2 ರವರೆಗೆ ವಿಜಯಪುರ, ರಾಯಚೂರು ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ನಡೆಸಲಾಗುತ್ತಿದೆ.  ನಂತರ ನಾಲ್ಕನೇ ಹಂತವಾಗಿ ಪಂಚರತ್ನ ಯಾತ್ರೆ ಕಿತ್ತೂರು ಕರ್ನಾಟಕದಲ್ಲಿ ನಡೆಯುತ್ತದೆ ಎಂದು ಹೆಚ್ ಡಿ ಕೆ ತಿಳಿಸಿದರು.

ಶಾಸಕ ತಿಪ್ಪಾರಡ್ಡಿ ಅಡಿಯೋ  ಪ್ರಕರಣಕ್ಕೆ ಪ್ರತಿಕ್ರಿಯೆ: ಇಡೀ ರಾಜ್ಯಕ್ಕೆ ಬಿಜೆಪಿ ಸಂಸ್ಕೃತಿ ಏನು ಗೊತ್ತಾಗಿದೆ. 40  ಫರ್ಸೆಂಟ್ ಸರ್ಕಾರವೋ 50 ಫರ್ಸೆಂಟ್ ಸರ್ಕಾರವೋ ಅವರ ಅವರಲ್ಲಿಯೇ ಆರೋಪ ಪ್ರತ್ಯಾರೋಪ ಮಾಡಲಾಗುತಿದೆ. ನಾವು ಚರ್ಚೆ ಮಾಡಿ ಏನು ಪ್ರಯೋಜನವಿಲ್ಲ. ಬಿಜೆಪಿಯ ನಾಯಕರು ಶಾಸಕರಲ್ಲಿಯೇ ಕೆಸರೇರಚಾಟ ಆರಂಭವಾಗಿದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಜನರು ಬಿಜೆಪಿಯನ್ನ ಹೊರಗೆ ಕಳುಹಿಸುತ್ತಾರೆ ಎಂದರು.

Share News

About BigTv News

Check Also

ಜೇವರ್ಗಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ; ಹಲವರಿಗೆ ಗಂಭೀರ ಗಾಯ

ಕಲಬುರಗಿ: ಜಿಲ್ಲೆಯ ಗಂವ್ಹಾರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಬಣಗಳ ನಡುವೆ ನಡೆದ ಗಲಾಟೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. …

Leave a Reply

Your email address will not be published. Required fields are marked *