ಹುಬ್ಬಳ್ಳಿ : ಇವತ್ತು ರಾತ್ರಿ ಅಥವಾ ನಾಳೆ ಬಿಜೆಪಿ ಪಟ್ಟಿ ಬಿಡುಗಡೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು, ಇವತ್ತು ಸಾಯಂಕಾಲ ಪಾರ್ಲಿಮೆಂಟರಿ ಮೀಟಿಂಗ್ ಫಿಕ್ಸ್ ಆಗಿದೆ. ಇವತ್ತು ರಾತ್ರಿ ಮೊದಲ ಪಟ್ಟಿ ಬಿಡುಗಡೆ ಆಗಬಹುದು. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಮ್ಮ ಲಿಸ್ಟ್ ಬಿಡುಗಡೆ ಆಗಿದೆ. ಹಿಂದಿನ ಚುನಾವಣೆಯಲ್ಲೂ ಇದೇ ತರಹ ಆಗಿದೆ. ಹೀಗಾಗಿ ವಿಳಂಬ ಅನ್ನೋ ಪ್ರಶ್ನೆ ಬರಲ್ಲ. ಕಾಂಗ್ರೆಸ್ ಒಂದು ತಿಂಗಳ ಮುಂಚೆ 224 ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡ್ತೀವಿ ಅಂದಿದ್ರು. ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ಎಲ್ಲವೂ ಫೈನಲ್ ಆಗಿ, ಇಂದು ರಾತ್ರಿ ಬಿಡುಗಡೆ ಆಗಬಹುದು ಎಂದು ಹೇಳಿದ್ದಾರೆ.
ಹಾಲಿ ಶಾಸಕರಿಗೆ ಟಿಕೆಟ್ ತಪ್ಪೋ ವಿಚಾರವಾಗಿ ಮಾತನಾಡಿದ್ದು, ಇದೊಂದು ಪ್ರತಿ ಇಲೆಕ್ಷನ್ ನಲ್ಲಿ ಇರೋ ಪ್ರೊಸೆಸ್ ಎಂದಿದ್ದಾರೆ. ಕೆಲವ ಕಡೆ ಶಾಸಕರ ವಿರೋಧಿ ಅಲೆ ಇರತ್ತೆ, ಕೆಲವರಿಗೆ ಆರೋಗ್ಯ ಸಮಸ್ಯೆ ಇರತ್ತೆ. ಹಾಗಾಗಿ ತಪ್ಪುತ್ತೆ ಅನ್ನೋ ಚರ್ಚೆ ಇರತ್ತೆ.
ಧಾರವಾಡದಲ್ಲಿ ಯಾರಿಗಾದ್ರೂ ಟಿಕೆಟ್ ಮಿಸ್ ಆಗತ್ತಾ ಅನ್ನೋ ಹೇಳಿಕೆಗೆ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು,ಅದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡತ್ತೆ ಎಂದಿದ್ದಾರೆ. ನಾನು ಈ ಬಾರಿ ಸ್ಪರ್ದೆ ಮಾಡ್ತೀನಿ. ಪದೇ ಪದೇ ನಾನು ಅದಕ್ಕ ಉತ್ತರ ಕೊಡಲ್ಲ, ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಖಚಿತ. ಎಲ್ಲದಕ್ಕೂ ಇಂದು ರಾತ್ರಿ ಉತ್ತರ ಸಿಗಲಿದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.