Breaking News

ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್,ಪ್ರಾಣಾಪಾಯದಿಂದಾ ಪಾರಾದ ಕುಟುಂಬಸ್ಥರು

ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಬಸಪ್ಪ ದ್ಯಾಮಣ್ಣ ಬುದಿಹಾಳ ಇವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಮನೆ ಸುಟ್ಟು ಹಾನಿಯಾಗಿದೆ. ವಿಷಯ ತಿಳಿದಂತೆ ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ್ ಪರಮಾನಂದ ಅವರಿಗೆ ಸೂಕ್ತ ಪರಿಹಾರ ದೊರಕಿಸುವಂತೆ ಹೇಳಿದರು. ನಂತರ ಕುಟುಂಬಸ್ಥರಿಗೆ ಧೈರ್ಯವನ್ನು ಹೇಳಿ ಆಹಾರ ಸಾಮಾಗ್ರಿ ಬಟ್ಟೆ ಆರ್ಥಿಕ ಸಹಾಯವನ್ನು ಮಾಡಿದರು. ಈ ಸಂದರ್ಭದಲ್ಲಿ ಮುತ್ತಣ್ಣ ಶಿವಳ್ಳಿ,ಮಲ್ಲೇಶ ದಲ್ಲಣ್ಣವರ,ಕಲ್ಲಪ್ಪ ಹರಕುಣಿ,ಅಲ್ತಾಪ್ ತಲವಾಯಿ, ಗ್ರಾಮಲೆಕ್ಕಾಧಿಕಾರಿ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share News

About admin

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಆರೋಪ..!ಆಹಾರ ಇಲಾಖೆ–ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯಾ..?

ಬಡವರ ಪಡಿತರ ಅಕ್ಕಿಗೆ ಕಳ್ಳರ ಕಣ್ಣು..!ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ಸಾಗಾಟದ ಹಾವಳಿ ಆರೋಪ..! ಪಡಿತರ ಅಕ್ಕಿ ಎಲ್ಲಿ ಹೋಗುತ್ತಿದೆ..?ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ದಂಧೆ …

Leave a Reply

Your email address will not be published. Required fields are marked *