ಹುಬ್ಬಳ್ಳಿ: ನಾನು ಭಾರತೀಯ ಜನತಾ ಪಾರ್ಟಿಯಲ್ಲಿಯೇ ಇರುತ್ತೇನೆ. ಅವರ ಸ್ಟ್ಯಾಂಡ್ ಬೇರೆ, ವೈಯಕ್ತಿಕ ಸಂಭಂದ ಬೇರೆ ಎಂದು ಹುಬ್ಬಳ್ಳಿಯಲ್ಲಿ ಶೆಟ್ಟರ್ ಸಹೋದರ MLC ಪ್ರದೀಪ್ ಶೆಟ್ಟರ್ ಹೇಳಿಕೆ.
ನಾನು ದಿನಾ ಈ ಮನೆಗೆ ಬರ್ತೀನಿ, ಊಟ ಮಾಡಿ ಹೋಗ್ತೀನಿ. ವೈಯಕ್ತಿಕ ಬೇರೆ, ಪಕ್ಷ ಬೇರೆ. ಅವರಿನ್ನು ಭಾರತೀಯ ಜನತಾ ಪಕ್ಷದಲ್ಲಿ ಇದ್ದಾರೆ. ಅವರಿನ್ನು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ.ಇನ್ನು 20 ರ ವರೆಗೂ ಸಮಯ ಇದೆ. ಅವರಿನ್ನು ಯಾವುದೇ ತೀರ್ಮಾನ ಮಾಡಿಲ್ಲ.
ನನ್ನ ನಿಲವು ನಾನು ಬಿಜೆಪಿಯಲ್ಲಿ ಇರ್ತೀನಿ. ಕಾಂಗ್ರೆಸ್ ನವರು, ಜೆಡಿಎಸ್ ನವರು ಅಹ್ವಾನ ಕೊಟ್ಟಿದ್ದಾರೆ.ಅದು ಜಗದೀಶ್ ಶೆಟ್ಟರ್ ಗೆ ಬಿಟ್ಟ ನಿರ್ಧಾರ. ಶೆಟ್ಟರ್ ಜೊತೆ ಇನ್ನು ಯಾರೂ ಮಾತಾಡಿಲ್ಲ ಎಂದ ಪ್ರದೀಪ್ ಶೆಟ್ಟರ್.