ಹುಬ್ಬಳ್ಳಿ: ಬದಾಮಿಗೆ ಅವಾಗ ಅವಾಗ ಬರ್ತಾ ಇರ್ತೀನಿ ಎಂದು ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಕ್ಷೇತ್ರ ಸಿಗ್ತಿಲ್ಲ ಅನ್ನೋ ಬಿಜೆಪಿ ನಾಯಕರ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರೀಯಿಸಿದ್ದಾರೆ. ಸುಮಾರು 20 ರಿಂದ 25 ಕ್ಷೇತ್ರದಲ್ಲಿ ಕರೀತಿದಾರೆ. ಎಲ್ಲ ಕಡೆ ನಿಲ್ಲೋಕೆ ಆಗಲ್ಲ.ಅದಕ್ಕೆ ನಾನು ಹೈಕಮಾಂಡ್ ಗೆ ಬಿಟ್ಟಿದೀನಿ. ಸೋಲೋರನ್ನ ಕರೀತಾರಾ, ಗೆಲ್ಲೋರನ್ನ ಕರೀತಾರಾ. ಅಭಿಮಾನ ಪ್ರೀತಿಯಿಂದ ಕರೀತಾರೆ, ಮತ್ತೆ ಕ್ಷೇತ್ರ ಇಲ್ಲ ಹೇಗೆ ಅಂತಾರೆ?.. ನಂಗೆ ಯಾವದೇ ಕ್ಷೇತ್ರ ಸಿಗದೆ ಇರೋ ತರಹ ಇದ್ರೆ 20 ಕಡೆ ಯಾಕೆ ಕರೀತಾರೆ ಎಂದು ಪ್ರಶ್ನಿಸಿದ್ದಾರೆ .
ರಾಹುಲ್ ಗಾಂಧಿ ಅನರ್ಹತೆ ವಿಚಾರವಾಗಿ ಮಾತನಾಡಿದ್ದು, ಪ್ರಜಾಪ್ರಭುತ್ವದಲ್ಲಿ ಇದು ಕರಾಳ ದಿನ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯವರು ಬೇಕು ಅಂತಾ ಬೇರೆ ನಾಯಕರನ್ನ ಎದುರಿಸಲಾಗದೆ ಮಾಡಿರೋ ಷಡ್ಯಂತ್ರ..ಬಹಳ ಜನ ಕೊಳ್ಳೆ ಹೊಡೆದು ವಿದೇಶಕ್ಕೆ ಹೋದ್ರು. ವಿಜಯ ಮಲ್ಯ, ನೀರವ ಮೋದಿ, ಇವರೆಲ್ಲ ಹೋದ್ತು ಇವರನ್ನ ಏನಂತ ಕರಿಬೇಕು?. ಸಾರ್ವಜನಿಕರ ದುಡ್ಡು ಕೊಳ್ಳೆ ಹೊಡೆದೋರನ್ನ ಏನಂತ ಕರೀಬೇಕು. ರಾಹುಲ್ ಗಾಂಧಿ ಕರೆದರೆ ತಪ್ಪಾ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಸತ್ಯ ಹೇಳಿದ್ರೆ ಬಿಜೆಪಿಯವರು ತಡಕೋಳೋದಿಲ್ಲ. ಸತ್ಯ ಹೇಳಬಾರದ, ಅದಕ್ಕೋಸ್ಕರ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದ್ದಾರೆ. ಇದು ನೀಚ ಹೇಡಿತನದ ಕೆಲಸ ಎಂದು ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ. ಎರಡು ವರ್ಷ ಶಿಕ್ಷೆ ಆದ ನಿದರ್ಶನ ಇದೆನಾ..? ಕೋರ್ಟ್ ಆದೇಶ ಮಾಡಿದೆ, ಸರಿನೋ ತಪ್ಪೋ ಎಂದು.
ರಾಹುಲ್ ಗಾಂಧಿ ಹೇಳಿರೋದು ಏನ ತಪ್ಪು. ಅವರೇನು ಮಾಹಾಪರಾಧ ಮಾಡಿದ್ದಾರೆ. ಲೂಟಿ ಹೊಡೆದವರನ್ನು ಬಿಜೆಪಿ ರಕ್ಷಣೆ ಮಾಡೋ ಕೆಲಸ ಮಾಡ್ತಿದೆ. ಅದನ್ನು ಮಾತಾಡಿದ್ರೆ ಇವರಿಗೆ ಶಿಕ್ಷೆ ನಾ…ಸತ್ಯ ಹೇಳಿದವರಿಗೆ ಶಿಕ್ಷೆ ಕೊಡೋಕೆ ಹೊರಟಿರೋದು ಪ್ರಜಾಪ್ರಭುತ್ವದ ಮಾರಕ. ಇದು ವಿಪರ್ಯಾಸ .
ಇದನ್ನು ಬ್ಲಾಕ್ ಡೇ ಎಂದು ಕರಿಬೇಕು ಎಂದು ಹೇಳಿದ್ದಾರೆ. ಕೊನೆಗೆ ಸುಧಾಕರ ವಿಚಾರ ಮಾತಾಡಲ್ಲ ಎಂದಿದ್ದಾರೆ.