Breaking News

ಹೃದಯಾಘಾತದಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ : ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. 64 ವರ್ಷದ ಶಿವಾನಂದ ಅಂಬಡಗಟ್ಟಿ ಅವರಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ.

1989 ರಿಂದ ರಾಜಕಾರಣದಲ್ಲಿ ಇದ್ದ ಇವರು, ಲೊಹೀತ್ ನಾಯ್ಕರ್ ವಿರುದ್ಧ ಪಕ್ಷೇತರರಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಶಾಸಕರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದ ಜೊತೆಗೆ ಸೇರಿ ಜಿಲ್ಲೆಯಲ್ಲಿ ಕೈ ಪಕ್ಷ ಬಲಪಡಿಸಲು ಶ್ರಮಿಸಿದ್ದರು. ಇವರು ಮಾಜಿ ಶಾಸಕ ಶ್ರೀಕಾಂತ್ ಅಂಬಡಗಟ್ಟಿ ಅವರ ಸಹೋದರರೂ ಹೌದು. ಇಂದು ಮಧ್ಯಾಹ್ನ 3 ಗಂಟೆಗೆ ಮೃತರ ಅಂತ್ಯಕ್ರಿಯೆ ಅಳ್ಳಾವರದ ರುದ್ರಭೂಮಿಯಲ್ಲಿ ನಡೆಯಲಿದೆ.

Share News

About BigTv News

Check Also

ಬೆಂಗಳೂರಲ್ಲಿ ಅಂಗಡಿಯಲ್ಲೇ ಮಾಲೀಕನ ಬರ್ಬರ ಕೊಲೆ

ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಅಂಗಡಿ ಮಾಲೀಕ ರಾಜು ಸಿಂಗ್ ಅವರನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ …

Leave a Reply

Your email address will not be published. Required fields are marked *