Breaking News

ಕಾಂಗ್ರೆಸ್ ನ ಪ್ರಭಲ ಅಭ್ಯರ್ಥಿಯಾದ ಪ್ರಸಾದ್ ಅಬ್ಬಯ್ಯ ಭರ್ಜರಿ ಮತಭೇಟೆ

ಕರ್ನಾಟಕ ವಿಧಾನ ಸಭಾ ಚುಣಾವಣೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆಬ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದೊಂದಿಗೆ ಮತಭೇಟೆ ನಡೆಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ನ ಪ್ರಭಲ ಅಭ್ಯರ್ಥಿಯಾದ ಪ್ರಸಾದ್ ಅಬ್ಬಯ್ಯ ಅವರು ಮನೆ ಮನೆಗೆ ತೆರಳಿ ಮತದಾರರ ಮನ ಒಲೆಸುವ ಪ್ರಯತ್ನವನ್ನು ಮಾಡುತ್ತಿದ್ದು ಪ್ರಚಾರ ಮಾತ್ರ ಭರ್ಜರಿಯಾಗಿ ನಡೆದಿದೆ. ಕಳೆದ ಎರಡು ಭಾರಿ ಈ ಕ್ಷೇತ್ರದಲ್ಲಿ ಅಬ್ಬಯ್ಯ ಅವರು ಪ್ರತಿನಿಧಿಸಿ ಗೆದ್ದು ಜಯಭೇರಿ ಭಾರಿಸಿದ್ದಾರೆ, ಪ್ರತಿ ಚುಣಾವಣೆಯಂತೆ ಈ ಚುಣಾವಣೆಯು ಪ್ರಭಲ ವಿರೋಧಿ ಸ್ಪರ್ಥಿಗಳೊಂದಿಗೆ ಚುಣಾವಣೆ ಅಖಾಡಕ್ಕೆ ಇಳದಿದ್ದು ಅಬ್ಬಯ್ಯ ಅವರಿಗೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಾತ್ ನೀಡಿ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಗುರುವಾರ ಹು-ಧಾ ಪೂರ್ವ ಕ್ಷೇತ್ರ ವ್ಯಾಪ್ತಿಯ ಅಜ್ಮಿರ್ ನಗರದಲ್ಲಿ ಮಹಾಲಕ್ಷ್ಮಿ ಕಾಲೋನಿ ಮತ್ತು ಸುತ್ತು ಮುತ್ತಲಿನ ಪ್ರದೇಶಗಲ್ಲಿ ಮತಯಾಚನೆ ಮಾಡಿದ್ದಾರೆ. ಹಿಂದೆ ಇದ್ದಂತ ಬಿಜೆಪಿ ಸರ್ಕಾರ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ ನಾನು ಈ ಹತ್ತು ವರ್ಷಗಳಿಂದ ಈ ಕ್ಷೇತ್ರದ ಜನರ ಆಶಿರ್ವಾದದಿಂದ ಶಾಸಕನಾಗಿದ್ದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಪೂರ್ವ ಕ್ಷೇತ್ರದ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ಮಾಡಿಸಿದ್ದೇನೆ, ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದೆ ಇಟ್ಟುಕೋಂಡು ಮತಯಾಚನೆ ಮಾಡುತ್ತಿದ್ದೇನೆ ಈ ಭಾರಿ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರಲಿದ್ದೇನೆ ಎಂದು ಅಬ್ಬಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ; 6 ಮಂದಿ ಅಂದರ್, 491 ಗ್ರಾಂ ಗಾಂಜಾ ಜಪ್ತಿ!

ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ …

Leave a Reply

Your email address will not be published. Required fields are marked *