ಬಿಜೆಪಿ ಸರ್ಕಾರ ಘೋಷಿಸಿದ ಮೂರು ಲಕ್ಷ ಕೋಟಿ ಬಜೆಟ್ ಎಲ್ಲಾ ಬೊಗಸ್. ನಾವೆಲ್ಲ ಇವರ ಬಜೆಟ್ ನೋಡಿಬಿಟ್ಟಿದ್ದೇವೆ. ಕಳೆದ ವರ್ಷ ಎರಡುವರೆ ಲಕ್ಷ ಬಜೆಟ್ ಘೋಷಣೆ ಮಾಡಿದ್ರು ಅದ್ರಲ್ಲಿ 50%ರಷ್ಟು ಏನು ಆಗಿಲ್ಲ .ಬೊಮ್ಮಾಯಿ ಅವರು ನಮ್ಮ ಭಾಗದವರು ಅಂತ ಅವರ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು.ಆದ್ರೆ ಅವರು ಯಾವುದೇ ವಿಶೇಷ ಕೊಡುಗೆಯನ್ನ ನೀಡಲಿಲ್ಲ. ಅವರ ಅಧಿಕಾರ ಅವಧಿ ಮುಗಿತಾ ಬಂದರು ಯಾವುದೇ ವಿಶೇಷ ಕೊಡುಗೆಯನ್ನ ಕೊಡಲಿಲ್ಲ. ಎಲ್ಲ ನಿರೀಕ್ಷೆಗಳು ಸುಳ್ಳಾದವು .ಡಬಲ್ ಇಂಜಿನ್ ಅಂದ್ರೆ ಇವೆರಡು ಬೋಗಸ್ ಇಂಜಿನ್ ಗಳು ಇಂಡಸ್ಟ್ರಿಯಲ್ ಮೆಟ್ ಅಂತಾರೆ ಏನೇನು ಸರ್ಕಸ್ ಮಾಡ್ತಾರೆ.ಆದ್ರೂ ಒಂದೇ ಒಂದು ಇಂಡಸ್ಟ್ರಿ ಕೂಡ ಕರ್ನಾಟಕಕ್ಕೆ ಬರ್ತಿಲ್ಲ, ಉತ್ತರ ಕರ್ನಾಟಕಕ್ಕೂ ಬರಲಿಲ್ಲ. ಕಾರಣ ಇವರು ಜಾತಿ ಧರ್ಮದ ಹೆಸರಲ್ಲಿ ದಂಗೆ ಎಬಸ್ತಿದ್ದಾರೆ . ಜನರು ಭಯದ ವಾತಾವರಣದಲ್ಲಿ ಇಂಡಸ್ಟ್ರಿ ಕೂಡ ಹಾಕ್ಲಿಕ್ಕೆ ಬರ್ತಿಲ್ಲ. ಅದಕ್ಕೆ ಈ ಬಜೆಟ್ ಯಾವುದಕ್ಕೂ ಅರ್ಥವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಎಂಎಲ್ಎ ಪ್ರಸಾದ್ ಅಭಯಾರ್ ಟೀಕಿಸಿದ್ದಾರೆ.
