Breaking News

ಪ್ರಕೃತಿಯ ನಿರ್ಲಕ್ಷ್ಯ: ಕಾಂಕ್ರಿಟ್ ಕಾಡುಗಳ ನಿರ್ಮಾಣ

ಹುಬ್ಬಳ್ಳಿ: ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಆದರೆ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ವೇಗವಾಗಿ ಬೆಳೆಯುತ್ತಿದ್ದರೆ, ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನೃಪತುಂಗ ಬೆಟ್ಟದಲ್ಲಿ ಮರಗಳ ಮಾರಣ ಹೋಮವಾಗುತ್ತಿದೆ. ನಗರಗಳು ಬೆಳೆದಂತೆ ಜನರಿಗೆ ಶುದ್ಧ ಗಾಳಿ ಸಿಗುತ್ತಿಲ್ಲ. ಮರಗಳನ್ನು ಕಡಿದು ಕಾಂಕ್ರಿಟ್ ಕಾಡುಗಳನ್ನು ನಿರ್ಮಿಸಲಾಗುತ್ತಿದೆ. ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಸುಂದರವಾದ ಬೆಟ್ಟವೆಂದು ಕರೆಯುವ ನೃಪತುಂಗ ಬೆಟ್ಟವೊಂದಿದೆ. ಈ ಬೆಟ್ಟದಲ್ಲಿ ಪ್ರಾಕೃತಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧದ ಮರಗಳು ಬೆಳೆಯುತ್ತವೆ. ಹಲವು ಬಗೆಯ ಗಿಡಮರಗಳಿಂದ ಬೆಟ್ಟ ಕಂಗೊಳಿಸುತ್ತೆ. ಆದರೆ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸಸಿಗಳು ಒಣಗುವುದರಿಂದ ಬೆಟ್ಟವನ್ನು ಹಸಿರಾಗಿ ಇಡಲು ಪರಿಸರ ಪ್ರೇಮಿಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಒಂದು ಕಡೆ ಮರಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮರಗಳು ಒಣಗಿದ್ದು, ಮತ್ತೊಂದೆಡೆ ಹಚ್ಚಿದ ಸಸಿಗಳ ಉಳಿಸಲು ಗ್ರೀನ್ ಕರ್ನಾಟಕ ತಂಡ ಪರದಾಡುತ್ತಿದೆ. ನೃಪತುಂಗ ಬೆಟ್ಟದ ವಾಕರ್ಸ್ ಅಸೋಸಿಯೇಶನ್, ಗ್ರೀನ್ ಕರ್ನಾಟಕ ಟೀಮ್‌ನ ಸದಸ್ಯರ ಪ್ರಯತ್ನದಿಂದ ಬೆಟ್ಟ ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತಿದೆ. ಇಂತಹ ತಂಡಗಳು ಅಶ್ವತ್ಥ, ಆಲ, ಹುಲಗಲ, ಗೋಣಿ, ಬೇವು, ಮಾಗನಿ ಸಸಿಗಳನ್ನು ನೆಟ್ಟು ನೀರುಣಿಸಿ ಸಲಹುತ್ತಿದ್ದರೆ. ಸ್ವಂತ ಖರ್ಚಿನಲ್ಲಿ ಸಸಿ ತಂದು ಹೊಂಡ ತಗಿಸಿ ಸಸಿ ನಡುವುದಲ್ಲದೆ ಟ್ರ್ಯಾಕ್ಟರ್ ಖರೀದಿಸಿ ಅದರಿಂದ ನೀರು ಪೂರೈಸುತ್ತಿದ್ದಾರೆ. ಒಟ್ಟಿನಲ್ಲಿ ನೃಪತುಂಗ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮರಗಳು ಸುಟ್ಟು ಹೋಗುತ್ತಿದ್ದರೆ, ಒಂದು ಕಡೆ ಮರಗಳ ಉಳುವಿಗೆ ಕರ್ನಾಟಕ ಗ್ರೀನ್ ತಂಡದ ಸದಸ್ಯರು ಮುಂದಾಗಿರೋದು ಮಾದರಿಯ ಕೆಲಸವಾಗಿದೆ.

Share News

About admin

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಆರೋಪ..!ಆಹಾರ ಇಲಾಖೆ–ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯಾ..?

ಬಡವರ ಪಡಿತರ ಅಕ್ಕಿಗೆ ಕಳ್ಳರ ಕಣ್ಣು..!ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ಸಾಗಾಟದ ಹಾವಳಿ ಆರೋಪ..! ಪಡಿತರ ಅಕ್ಕಿ ಎಲ್ಲಿ ಹೋಗುತ್ತಿದೆ..?ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ದಂಧೆ …

Leave a Reply

Your email address will not be published. Required fields are marked *