ಹುಬ್ಬಳ್ಳಿ: ಬಣಜಿಗ ಬಂಧುಗಳು ಸಂಕ್ರಾಂತಿ ಸಂಭ್ರಮ ಸಮಿತಿ, ಹುಬ್ಬಳ್ಳಿ ತಾಲೂಕು ವತಿಯಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ನಗರದ ಗೋಕುಲ್ ರಸ್ತೆಯ ಚವ್ಹಾನ್ ಗಾರ್ಡನ್ ನಲ್ಲಿ ಜನೆವರಿ ೧೫ ರಂದು ಸಾಯಂಕಾಲ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೋಮಶೇಖರ ಉಮರಾಣಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಈ ಕಾರ್ಯಕ್ರಮಕ್ಕೆ ಚಲನಚಿತ್ರ ಹಾಸ್ಯ ನಟ ದೊಡ್ಡಣ್ಣ ಎಸ್, ಸಂಗೀತ ಸಂಯೋಜನಾಕಾರಿ ಭೋಜಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ಬೆ. ೧೦ ರಿಂದ ಸಾಯಂಕಾಲ ೬.೩೦ ರವರೆಗೆ ಚಿಕ್ಕಮಕ್ಕಳಿಗಾಗಿ ಗ್ರಾಮೀಣ ಕ್ರೀಡೆಗಳು, ಸ್ವಾಗತ ಗೀತೆ ಬಸವೇಶ್ವರ ಭಾವಚಿತ್ರ ಪೂಜೆ ಹಾಗೂ ದೀಪಬೆಳಗುವ ಕಾರ್ಯಕ್ರಮ, ಚಲನಚಿತ್ರ ನಟ ದೊಡ್ಡಣ್ಣ ಅವರಿಂದ ಮನೋರಂಜನಾ ಕಾರ್ಯಕ್ರಮ, ಪ್ರಸನ್ನ ಅವರಿಂದ ಚಲನಚಿತ್ರ ಗೀತೆಗಳು, ಮೊಬೈಲ್ ಮಲ್ಲಣ್ಣ ಹಾಸ್ಯ ಕಾರ್ಯಕ್ರಮ, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಗೀತೆಗಳು, ಕುಂದಗೋಳ ತಾಲೂಕಿನ ಹರ್ಲಾಪೂರದ ಶಂಬಯ್ಯ ಹಿರೇಮಠ ಹಾಗೂ ಸಂಗಡಿಗರಿಂದ, ಚಿಕ್ಕಮಕ್ಕಳಿಂದ ಕಾರ್ಯಕ್ರಮ, ಪುರುಷರಿಂದ ಮತ್ತು ಮಹಿಳೆಯರಿಂದ ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಹೌಜಿ ಆಟ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದ್ಸು, ಮಹಿಳೆಯರು ಹಾಗೂ ಪುರುಷರಿಗಾಗಿ ಗ್ರಾಮೀಣ ಡ್ರೆಸ್ ಕೋಡ್ ಇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ ವಿ ಅಂಗಡಿ, ಮಹಾಂತೇಶ ಕುಮಟಗಿ, ಧಾರವಾಡ ಶೆಟ್ಟರ್, ಈರಣ್ಣ ಮಳಗಿ ಗುರುಪಾದಪ್ಪ ಶಿರೂರ ಆನಂದ ಉಪ್ಪಿನ ಸೋಮಶೇಖರ್ ಉಮರಾಣಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

