ಕಲಘಟಗಿ ಪಟ್ಟಣದ ಪಶು ಸಂಗೋಪನಾ ಇಲಾಖೆಯಲ್ಲಿ ಪಶು ವೈದ್ಯಕೀಯ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಾಂದಸಾಬ್ ಕಿರೇಸೂರ ರಾಷ್ಟ್ರೀಯ ಹೆದ್ದಾರಿ 63 ರ ಶಿಂಗನಳ್ಳಿ ಕ್ರಾಸ್ ಬಳಿ ಕರ್ತವ್ಯದ ಮೇಲೆ ತಂಬೂರ ಗ್ರಾಮಕ್ಕೆ ಹೋಗುತ್ತಿರುವಾಗ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ತಾಲೂಕಾ ದೇವೇಂದ್ರಪ ಪಶುವೈದ್ಯಾಧಿಕಾರಿ ಲಮಾಣಿ, ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕ ಪರಾರಿಯಾಗಿದ್ದು,ಅವರ ಬಂಧನಕ್ಕೆ ಜಾಲ ಬಿಸಿದ್ದಾರೆ.