ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಚಿತ್ರ ಕಾಯಿಲೆಗಳಿಂದ ಜನರು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಈಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಇಂತಹದೇ ಒಂದು ವಿಚಿತ್ರ ಕಾಯಿಲೆಗೆ ಯಶಸ್ವಿ ಚಿಕಿತ್ಸೆ ನೀಡದ್ದಾರೆ.ಅದು ಸಾಮಾನ್ಯ ಕಾಯಿಲೆ ಆಗಿರಲಿಲ್ಲ.ಕೆಲ ಕ್ಷಣ ಉಸಿರಾಟವೇ ನಿಂತು ಹೋಗಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವಿನ ಕದ ತಟ್ಟಿದ್ರು. 10 ಲಕ್ಷ ಜನರಲ್ಲಿ ಕಾಣಸಿಕೊಳ್ಳೋ ಈ ವಿರಳ ಕಾಯಿಲೆಗೆ ಅವರು ತುತ್ತಾಗಿದ್ದು ಬಹಳ ವಿಚಿತ್ರ. ಖಾಸಗಿ ಆಸ್ಪತ್ರೆಯಲ್ಲಿ ಕಾಯಿಲೆ ವಾಸಿ ಮಾಡಲು ಲಕ್ಷ ಲಕ್ಷ ಕೇಳಿದ್ರು. ಹಣ ಇಲ್ದೆ ಆ ಮಹಿಳೆ ಕಿಮ್ಸ್ ಗೆ ದಾಖಲಾಗಿದ್ದರು. ಈ ಮಹಿಳೆಗೆ ಹೃದಯದ ಮೇಲೆ ಬೃಹದಾಕಾರದ ಗಡ್ಡೆಬೆಳೆದಿದ್ದು… ಸತತ ಎರಡು ಗಂಟೆ ಕಾಲ ಆಪರೇಶನ್ ಮಾಡಿ ಗಡ್ಡೆಯನ್ನು ತಗೆದು ಪ್ರಾಣಾಪಾಯದಿಂದ ಮಹಿಳೆಯನ್ನಾ ಪಾರು ಮಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರಾದ ಡಾ. ಕೋಬಾನಾ ಕಟ್ಟಿಮನಿಯವರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದ್ದು, ಮಹಿಳೆಯ ಪ್ರಾಣ ಉಳಿಸಿದ್ದಾರೆ.
ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ನಿವಾಸಿಯಾದ ನೀಲವ್ವ ನಾಗರಳ್ಳಿ (54) ಕಳೆದ ಒಂದು ವರ್ಷದಿಂದ ಪೆರಿಕಾರ್ಡಿಯಲ್ ಸಿಸ್ಟ್ ಹೃದಯದ ಮೇಲೆ ಗಡ್ಡೆ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯದ ಮೇಲೆ ಗಡ್ಡೆಯಾದ ಪರಿಣಾಮ ನೀಲವ್ವನಿಗೆ ಉಸಿರಾಟ ತೊಂದರೆ, ಮುಖ ಬಾವು ಬರೋದು ಆಗ್ತಿತ್ತು. ಕೆಲ ಕ್ಷಣ ಉಸಿರಾಟವೇ ನಿಂತು ಹೋದಂಗೆ ಆಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಆಪರೇಶನ್ ಗೆ ಸರಿಸುಮಾರು ಐದು ಲಕ್ಷ ಕೇಳಿದರು. ಆದ್ರೆ ಅಷ್ಟೊಂದು ಹಣವಿಲ್ಲದ ಕಾರಣ ಕುಟುಂಬಸ್ಥರು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿದ್ದರು. ಮಹಿಳೆಯನ್ನು ತಪಾಸಣೆ ಮಾಡಿ ಚಿಕಿತ್ಸೆ ಮಾಡಿದ ವೈದ್ಯರು, ಇದೀಗ ಪೆರಿಕಾರ್ಡಿಯಲ್ ಸಿಸ್ಟ್ ಕಾಯಿಲೆಯನ್ನು ವಾಸಿ ಮಾಡಿದ್ದಾರೆ. ಹೃದಯದ ಮೇಲೆ ಗಡ್ಡೆಯನ್ನು ಸಂಪೂರ್ಣವಾಗಿ ರಿಮೂವ್ ಮಾಡಿದ್ದು, ಇದೀಗ ನೀಲವ್ವ ಮೊದಲಿನ ತರ ಆರಾಮಾಗಿದ್ದಾರೆ. ಕಿಮ್ಸ್ ಅಂದ್ರೆ ಹಾಗೇ ಹೀಗೆ ಅಂತಾ ಜನಾ ಮಾತಾಡೋದು ಕಾಮನ್ ಆಗಿತ್ತು, ಆದರೆ ಆಪರೇಶನ್ ಗೆ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಕಿಮ್ಸ್ ವೈದ್ಯರು ದೇವರಾಗಿದ್ದು, ಪೆರಿಕಾರ್ಡಿಯಲ್ ಸಿಸ್ಟ್ ಕಾಯಿಲೆಯಿಂದ ಬಳಲುತ್ತಿದ್ದ ನೀಲವ್ವ ಇದೀಗ ಮತ್ತೆ ಎಂದಿನಂತೆ ಲವಲವಿಕೆಯಿಂದ ಓಡಾಡುವಂತೆ ಮಾಡಿದ್ದಾರೆ.

