ಹುಬ್ಬಳ್ಳಿ: ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಗೋ ಬ್ಯಾಕ್ ಅಭಿಯಾನವನ್ನು ಕಾಂಗ್ರೇಸ್ ಪಕ್ಷದವರೇ ಕೈಗೆತ್ತಿಕೊಂಡಿದ್ದಾರೆ. ರಜತ್ ಉಳ್ಳಾಗಡ್ಡಿಮಠ ಅವರಿಂದ ಈ ಒಂದು ಅಭಿಯಾನ ಆರಂಭವಾಗಿದೆ, ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ, ಕೆಲವೊಂದಿಷ್ಟು ಸರ್ಕಾರದ ವೈಫಲ್ಯವನ್ನು ಕಂಡಿಸಿ ಹಲವು ದಿನಗಳಿಂದಲ್ಲೂ ಅಭಿಯಾನ ನಡೆಸುತ್ತಿದ್ದಾರೆ. ಈ ಒಂದು ಅಭಿಯಾನಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಬೆಂಬಲ ನೀಡಿದ್ದಾರೆ. ರಜತ್ ಉಳ್ಳಾಗಡ್ಡಿಮಠ ಕಾಂಗ್ರೇಸ್ ಪಕ್ಷದ ಯುವ
ಮುಖಂಡನಾಗಿದ್ದು, ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಅಭಿಯಾನ ಆರಂಬಿಸಿದ್ದರು. ಇನ್ನೂ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಜನೆವರಿ 12 ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಗೋಬ್ಯಾಕ್ ಎನ್ನುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಿದ ವ್ಯಾಪಾರಿ ಮೋದಿಗೆ ಸ್ವಾಗತಿಸಬೇಕಾ ..?
ಹುಬ್ಬಳ್ಳಿಯನ್ನು ಸ್ಮಾರ್ಟ್ ಸಿಟಿ ಯನ್ನಾಗಿ ಮಾಡೊದಾಗಿ ಹೇಳಿ Ugly ಮಾಡಿದ ಮೋದಿಗೆ ಸ್ವಾಗತಿಸಬೇಕಾ..?
ಬಿಆರ್ ಟಿಎಸ್ ತಂದು ಸಾವಿರಾರು ಜನರ ಉದ್ಯೋಗ ಕಸಿದುಕೊಂಡು ನೂರಾರು ಅಮಾಯಕ ಜನರ ಬಲಿ ಪಡೆದ ಮೋದಿಗೆ ಸ್ವಾಗತಿಸಬೇಕಾ..?
ಖಾದಿ ತ್ರಿವರ್ಣ ರಾಷ್ಟ್ರ ಧ್ವಜವನ್ನು ಮೂಲೆಗುಂಪು ಮಾಡಿ ಚೈನಾದ ಪಾಲಿಸ್ಟರ್ ಧ್ವಜ ತಂದ ಮೋದಿಗೆ ಸ್ವಾಗತಿಸಬೇಕಾ..?
ಹೀಗೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಗೋ ಬ್ಯಾಕ್ ಮೋದಿ ಎಂಬ ಅಭಿಯಾನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೂ ಮುನ್ನವೇ ಹುಬ್ಬಳ್ಳಿಯ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಆರಂಭವಾಗಿರುವುದು ವಿಶೇಷವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

