Breaking News

ಕಾಂಗ್ರೆಸ್ ಶಾಸಕಿ ವಿರುದ್ಧ ಹ… ಅಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಮುಖಂಡ…

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ಹಾಲಿ ಶಾಸಕಿಯ ವಿರುದ್ಧ ಕಾಂಗ್ರೆಸ್ ಪಾಳೆಯದಲ್ಲಿಯೇ ಟಿಕೆಟ್ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಿಯೊಬ್ಬರು ಸುದ್ಧಿಗೋಷ್ಟಿಯಲ್ಲಿಯೇ ಅಸಂವಿಧಾನಿಕ ಭಾಷೆ ಬಳಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿಂದು ಶಿವಾನಂದ ಬೆಂತೂರ ನೇತೃತ್ವದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಸಿ.ಜೆ. ಪಾಟೀಲ ಎಂಬುವಂತ ಟಿಕೆಟ್ ಆಕಾಂಕ್ಷಿ, ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರ ವಿರುದ್ಧವೇ ಅಸಂವಿಧಾನಿಕ ಭಾಷೆ ಬಳಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಕುಸುಮಾವತಿ ಶಿವಳ್ಳಿಯವರ ವಿರುದ್ಧ ಬಂಡಾಯ ಚುನಾವಣೆ ಸಾರಲು ಸಿದ್ಧವಾಗಿರುವ ಹತ್ತು ಜನರ ತಂಡದಲ್ಲಿ ಸಿ.ಜೆ.ಪಾಟೀಲ‌ ಕೂಡ ಒಬ್ಬರಾಗಿದ್ದು, ಪ್ರತಿಷ್ಠಿತ ಸುದ್ಧಿಗೋಷ್ಟಿಯಲ್ಲಿಯೇ ಅಸಂವಿಧಾನಿಕ ಭಾಷೆ ಬಳಸಿದ್ದು, ಪತ್ರಕರ್ತರು ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಕಾಂಗ್ರೆಸ್ ಮುಖಂಡರು ಕ್ಷಮೆಯಾಚನೆ ಮಾಡಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ.

ಚುನಾವಣೆ ಕಾವು ಸಾಕಷ್ಟು ಕಾವು ಪಡೆದುಕೊಳ್ಳುತ್ತಿದ್ದು, ಪಕ್ಷದ ಪ್ರತಿಷ್ಟೆಗಿಂತ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿ ಮಾರ್ಪಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಶಾಸಕಿ ಕುಸುಮಾವತಿ ಶಿವಳ್ಳಿಯವರ ವಿರುದ್ಧ ಅಸಂವಿಧಾನಿಕ ಭಾಷೆ ಬಳಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Share News

About Shaikh BigTv

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *