ಹುಬ್ಬಳ್ಳಿ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳು, ಕಡಲೆ ಬೆಳಗೆ , ಹತ್ತಿ ಬೆಲೆ ಏರಿಕೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾಜಿ ಸಚಿವರಾದ ಕೆ.ಎನ್.ಗಡ್ಡಿ ಹಾಗೂ ಜಿ.ಪಂ. ಮಾಜಿ ಉಪಾಧ್ಯಕ್ಷ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಾನಂದ ಕರಿಗಾರ ಅವರ ನೇತೃತ್ವದಲ್ಲಿ ಬೃಹತ್ ರೈತ ಪ್ರತಿಭಟನೆಯನ್ನು ನಗರದ ಚೆನ್ನಮ್ಮ ವೃತ್ತದಲ್ಲಿಂದು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಕರಿಗಾರ, ಜಿಲ್ಲೆಯ ರೈತರು ಬೆಳೆದ ಕಡಲೆ ಈಗಾಗಲೇ ಸಿಡಿ ಹಾಯ್ದು ಹಾಳಾಗಿದೆ. ಶೀಘ್ರದಲ್ಲೇ ಪ್ರತಿ ಎಕರೆಗೆ ೧೦,೦೦೦ ರೂ. ಪರಿಹಾರ ನೀಡಬೇಕು, ರೈತರು ಪಾವತಿಸಿದ ಎಲ್ಲಾ ಬೆಳೆಗಳ ಬೆಳೆ ವಿಮೆಯನ್ನು ಗರಿಷ್ಠ ಮಟ್ಟದಲ್ಲಿ ಬಿಡುಗಡೆ

ಮಾಡಬೇಕು, ಎಲ್ಲಾ ಬೆಳೆಗಳ ಖರೀದಿ ಕೇಂದ್ರ ಸ್ಥಾಪನೆ ಮಾಡಿ ನಿರಂತರ ಖರೀದಿ ಪ್ರಾರಂಭಿಸಬೇಕು, ಧಾರವಾಡ ಜಿಲ್ಲೆಯ ಎಲ್ಲಾ ಗ್ರಾಮಗಳ ಸಂಪರ್ಕ ರಸ್ತೆ ಮತ್ತು ಹೊಲ, ಮನೆ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಗಳ ದುರಸ್ತಿ ಕಾರ್ಯವನ್ನು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಫಾರೂಖ್ ಅಬ್ಬುನ್ ವರ್( ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ), ಸುಭಾಷ್ ಹಾವನ್ನವರ, ಹನುಮಂತಪ್ಪ ಕುರಬರ, ಹನುಮಂತಪ್ಪ ಕಂಬಳಿ, ಗೂಳಪ್ಪ ಕುರಡಿಕೇರಿ, ನಿಂಗಪ್ಪ ಕುರುಬರ, ದೇವಪ್ಪ ಚಾಕ್ರಿ ಉಪಸ್ಥಿತರಿದ್ದರು.