ಧಾರವಾಡ : ನಾಳೆ ಧಾರವಾಡದ ಐಐಟಿ ನೂತನ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ಮೋದಿ ಐಐಟಿಗೆ ಆಗಮಿಸಲಿದ್ದು, ಅದರ ಕೊನೆಯ ಹಂತದ ಸಿದ್ಧತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಿಶೀಲನೆ ನಡೆಸಿದರು. ಸಚಿವರೊಂದಿಗೆ ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಭೇಟಿ ನೀಡಿದ್ದರು. ಕಾರ್ಯಕ್ರಮದ ಮುಖ್ಯವೇದಿಕೆ, ಸಿರಿಧಾನ್ಯಗಳ ಚಿತ್ರಣ, ಮೋದಿ ಆಗಮಿಸುವ ರಸ್ತೆ, ಹೆಲಿಪ್ಯಾಡ್ ಸೇರಿದಂತೆ ಇತ್ಯಾದಿ ಸಿದ್ಧತೆಗಳನ್ನು ಜೋಶಿ ಕೊನೆಯದಾಗಿ ಪರಿಶೀಲನೆ ನಡೆಸಿದರು.
