Breaking News

ಶಿರೂರ ಗ್ರಾಮದ ಬಹುದಿನಗಳ ಬೇಡಿಕೆಯನ್ನಾ ನೆರವೇರಿಸಿದ ಶಾಸಕಿ ಕುಸುಮಾವತಿ

ಕುಂದಗೋಳ : ಮತಕ್ಷೇತ್ರದ ಶಿರೂರ ಗ್ರಾಮದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರು, ಗ್ರಾಮದ ಬಹುದಿನಗಳ ಬೇಡಿಕೆಯಾದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಕಾಮಗಾರಿಕೆಯು ಮೈಲಾರಲಿಂಗೇಶ್ವರ ದೇವಸ್ಥಾನದಿಂದ ರಾಜೇಖಾನವರ ಇವರ ಮನೆಯವರೆಗೆ ಇದ್ದು, ಸರಾಸರಿ ಅಂದಾಜು ಮೊತ್ತ 7 ಲಕ್ಷ ರೂಪಾಯಿ ವೆಚ್ಚದ್ದಾಗಿರುತ್ತದೆ. ಭೂಮಿ ಪೂಜೆಯನ್ನು ನೆರವೇರಿಸಿದ ನಂತರ ಮಾತನಾಡಿದ ಶಾಸಕಿ ಕುಸುಮಾವತಿ ಅವರು ಶಿರೂರ ಗ್ರಾಮದ ಬಹು ದಿನದ ಬೇಡಿಕೆಯ ರಸ್ತೆ ಕಾಮಗಾರಿ ಪ್ರಾರಂಭಯವಾಗಿದ್ದು, ಇದರ ಉಪಯೋಗ ತಮ್ಮೆಲ್ಲರಿಗೂ ದೊರಕಲಿ ಎಂದು ತಿಳಿಸಿದರು. ಶಿರೂರ ಗ್ರಾಮಕ್ಕೆ ಹಲವಾರು ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಸೇವೆಯನ್ನು ಮಾಡಿದ್ದೇನೆ ತಮ್ಮೆಲ್ಲರ ಬೆಂಬಲ ಸದಾ ನನ್ನ ಮೇಲೆ ಇರಲಿ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅಶೋಕ ಘೋರ್ಪಡೆ, ಬಸವರಾಜ್ ಮುಂಗೋಣಿ, ಶಂಕರಪ್ಪ ದೇವಕ್ಕನವರ, ಹನಮಂತ ಬಾರಕೇರ ,ಎಂ ಬಿರಣ್ಣವರ, ಈರಮ್ಮ ಬಾರಕೇರ ಸೆರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

Share News

About admin

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *