ಹುಬ್ಬಳ್ಳಿ : ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಲಿಂಗಾಯತರಿಗೆ ಗೌರವ ಕೊಟ್ಟಿದ್ದು ಬಿಜೆಪಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ.
ಲಿಂಗಾಯತ, ವೀರಶೈವರಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದು ಬಿಜೆಪಿ. ಕಾಂಗ್ರೆಸ್ ಲಿಂಗಾಯತರ ಮುಖ್ಯಮಂತ್ರಿ ಎಂದು ಹೇಳಲಿ ನೊಡೋಣ. ನಮ್ಮ ಧರ್ಮ ಒಡೆದಿದ್ದು ಕಾಂಗ್ರೆಸ್. ಬಿಜೆಪಿ ಶೆಟ್ಟರ್ ಅವರನ್ನು ಲಿಂಗಾಯತ ನಾಯಕ ಎಂದು ಬೆಳಸಲಿಲ್ಲ. ಶೆಟ್ಟರ್ ಬೆಳದಿದ್ದು, ಪಕ್ಷದ ತತ್ವ ಸಿದ್ದಾಂತದಿಂದ. ಕೆಲ ಕಾರ್ಯಕರ್ತರು ಜೀವ ಕೊಟ್ಟಿದ್ದಾರೆ. ಲಿಂಗಾಯತ ಅಂತಾ ಅವರು ಬೆಳದಿಲ್ಲ, ಜೀವ ಕೊಟ್ಟಿದ್ದಕ್ಕೆ ಅವರು ಬೆಳದಿದ್ದಾರೆ. ಮನೆವರೆಗೂ ಬಂದು ನಮ್ಮ ನಾಯಕರು ರಾಜ್ಯಸಭಾ ಸದಸ್ಯ ಮಾಡ್ತೀನಿ ಎಂದರು. ಆದ್ರೆ ಇವತ್ತು ಅವರು ಕಾಂಗ್ರೆಸ್ ಶಾಲ ಹಾಕಿದ್ದು ಬಹಳ ನೋವಾಗಿದೆ. ಇದನ್ನು ನಾವ ಕನಸಲ್ಲೂ ಉಹಿಸರಲಿಲ್ಲ. ಜಗದೀಶ್ ಶೆಟ್ಟರ್ ಗೆ ತತ್ವ ಸಿದ್ದಾಂತ ಇದ್ರೆ ಪಕ್ಷೇತರ ನಿಲ್ಲಬೇಕಾಗಿತ್ತು ಎಂದು ಅರವಿಂದ ಬೆಲ್ಲದ್ ಸವಾಲ್.
ಸೆಂಟ್ರಲ್ ಕ್ಷೇತ್ರ ಇಲ್ಲಿ ಸಾಮಾನ್ಯ ಕಾರ್ಯಕರ್ತರು ನಿಂತರೂ ಗೆಲ್ತಾನೆ. ಶೆಟ್ಟರ್ ಗೆ ಆಗಿರೋದು ಲಿಂಗಾಯತರಿಗೆ ಆದಂತ ಅಲ್ಲ. ಹಾಗೆ ಬಿಂಬಿಸಬಾರದು.ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ನಿಂದ ಏನೂ ಆಗಲ್ಲ. ಇದು ತಗೆದುಕೊಂಡ ತಪ್ಪು ನಿರ್ಣಯ. ನಾವು ವಿಚಿತರಾಗಿಲ್ಲ, ಇಲೆಕ್ಷನ್ ರಿಜಲ್ಟ್ ನೋಡಿ. ಎಲ್ಲ ಹುದ್ದೆಗಳನ್ನ ಪಡೆದ ಏಕೈಕರು ಜಗದೀಶ್ ಶೆಟ್ಟರ್ ಎಂದ ಅರವಿಂದ ಬೆಲ್ಲದ್.
bigtvnews | Hubli Dharwad News | Kannada News | Karnataka News Hubli News | News In Hubli | Local news





