Breaking News

ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡ್ತಿದೆ-ಎಂ.ಬಿ.ಪಾಟೀಲ‌

ಹುಬ್ಬಳ್ಳಿ: ಶೆಟ್ಟರ್ ಗೆ ಟಿಕೇಟ್ ನಿರಾಕರಿಸಿರೋದಕ್ಕೆ ಸಕಾರಣವಿಲ್ಲ. 75 ವರ್ಷ ವಯಸ್ಸಾದವರಿಗೂ ಬಿಜೆಪಿ‌ ಟಿಕೇಟ್ ಕೊಟ್ಟಿದೆ. ಜನ ಸಂಘದಿಂದ ಅವರ ರಾಜಕಾರಣ ಆರಂಭಗೊಂಡಿತ್ತು. ಟಿಕೇಟ್ ನಿರಾಕರಿಸಿರೋದು‌ ಸಮುದಾಯಕ್ಕೆ ಅಪಮಾನ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕಾಂಗ್ರೆಸ್ ಗೆ ಬಂದಿದ್ದಾರೆ. ಇದೊಂದು ಷಡ್ಯಂತ್ರ. ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ನಡು ನೀರಲ್ಲಿ‌ ಕೈಬಿಟ್ಟರು. ಲಕ್ಷ್ಮಣ ಸವದಿ ನಂತರ ಶೆಟ್ಟರ್ ಗೆ ಅನ್ಯಾಯ ಮಾಡಲಾಗಿದೆ. ಇದೊಂದು‌ ದೊಡ್ಡ ಅಪಮಾನ ಮಾಡಲಾಗಿದೆ. ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡ್ತಿದೆ. ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ಬಿಸಾಡಿದರು. ಯಡಿಯೂರಪ್ಪ, ಸವದಿ, ಶೆಟ್ಟರ್ ನಂತರದ ಪಾಳಿ ಬೊಮ್ಮಾಯಿ ಅವರದ್ದು. ಅವರನ್ನೂ ಮೂಲೆಗುಂಪು ಮಾಡೋದು ಖಚಿತ. ಅದನ್ನೇ ನಾನು ಮೂರು ಸಾವಿರ ಮಠದ ಶ್ರೀಗಳಿಗೆ ಹೇಳಿದ್ದೇನೆ. ಎಚ್.ಡಿ.ಕೆ ಹೇಳಿದಂತೆಯೆ ಬ್ರಾಹ್ಮಣರನ್ನು ಸಿಎಂ ಮಾಡಲು ಹೊರಟಿದೆ. ಲಿಂಗಾಯಿತ ಸಮುದಾಯದ ಪರವಾಗಿ ಮಾತನಾಡ್ತಿದ್ದೇನೆ. ನಾವು ಬ್ರಾಹ್ಮಣ ಸಮುದಾಯದ ವಿರೋಧಿಗಳಲ್ಲ. ಬ್ರಾಹ್ಮಣರು ಕೆಟ್ಟವರು ಅಂತ ಹೇಳಲ್ಲ. ಆದ್ರೆ ಕೆಲವರು ಕೆಟ್ಟದ್ದನ್ನು ಮಾಡಿದಾಗ ಮಾತನಾಡಬೇಕಾಗುತ್ತದೆ ಎಂದು ಮೂರುಸಾವಿರ ಮಠದ ಶ್ರೀಗಳನ್ನು ಭೇಟಿ ಮಾಡಿದ ನಂತರ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ‌ ಹೇಳಿಕೆ.

Share News

About BigTv News

Check Also

ಮೀನು ಕದ್ದ ಆರೋಪ : ಮರಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ

ಮೀನು ಕದ ಆರೋಪದಡಿ ಮಹಿಳೆ ಒಬ್ಬರನ್ನು ಮರಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ …

Leave a Reply

Your email address will not be published. Required fields are marked *

You cannot copy content of this page