Breaking News

ಅಕ್ರಮ ಪಡಿತರ ಅಕ್ಕಿ ಪತ್ತೆ ಐವರ ಬಂಧನ

ಹುಬ್ಬಳ್ಳಿ: ಸಿಸಿಬಿ ಘಟಕದಿಂದ ಅಕ್ರಮವಾಗಿ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ರೇಷನ್ ಅಕ್ಕಿ ಜಪ್ತಿ ಮಾಡಿ ಐವರನ್ನು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಯಾರ್ಡದಲ್ಲಿರುವ ದಾಸ್ತಾನು ಮಳಿಗೆ ಮೇಲೆ ದಾಳಿ ಮಾಡಿ ಸುಮಾರು 450 ಚೀಲಗಳಲ್ಲಿ ಸಂಗ್ರಹಿಸಿದ್ದ (ಪ್ರತಿ ಚೀಲ 50 ಕೆ.ಜಿ ತೂಕ) ಅಕ್ಕಿ (5,00,000/- ರೂ) ಹಾಗೂ ನಾಲ್ಕು ವಾಹನಗಳ ಸೇರಿ ಒಂಬತ್ತು ಲಕ್ಷ ಮೌಲ್ಯದ ಅಕ್ಕಿ ಹಾಗೂ ನಾಲ್ಕು ವಾಹನ ಜಪ್ತಿ ಮಾಡಲಾಗಿದೆ.

ಹುಬ್ಬಳ್ಳಿ ಸಿಸಿಬಿ ಘಟಕದಿಂದ ಅಕ್ರಮವಾಗಿ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ರೇಷನ್ ಅಕ್ಕಿ ಜಪ್ತಿ ಮಾಡಿ ಐವರನ್ನು ಬಂಧಿಸಲಾಗಿದೆ.ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಯಾರ್ಡ ನಲ್ಲಿ ಷಣ್ಮುಖಪ್ಪ ಬೆಟಗೇರಿ ಈತನು ಸರ್ಕಾರದಿಂದ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು 10 ರಿಂದ 15 ರೂಪಾಯಿ ಬೆಲೆಗೆ ಸಾರ್ವಜನಿಕರಿಂದ ಖರೀದಿಸಿ ಮಂಜುನಾಥ ಹರ್ಲಾಪುರ ಎನ್ನುವರಿಗೆ ಮಾರಾಟ ಮಾಡುತ್ತಿದ್ದು, ಮಂಜುನಾಥ ಹರ್ಲಾಪುರ ಈತನು ಸುಮಾರು 35 ರಿಂದ 40 ರೂಪಾಯಿ ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ನಾಲ್ಕು ವಾಹನಗಳ ಸಮೇತ ಐವರನ್ನು ಬಂಧಿಸಿ ಹುಬ್ಬಳ್ಳಿ ಎಪಿಎಂಸಿ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿವಿ ಎಸಿಪಿ ನಾರಾಯಣ ವಿ. ಬರಮನಿ ನೇತೃತ್ವದ ತಂಡ ದಾಳಿ ನಡೆಸಿದ್ದುದ್ದು,ಪೊಲೀಸ್ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ರವರು ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಸದರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಸಿಸಿಬಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಾದ ನಾರಾಯಣ ವಿ. ಬರಮನಿ ಎಸಿಪಿ, ರಮೇಶ ಕಾಂಬಳೆ ಪಿಐ, ಗೋಪಾಲ ರಾಠೋಡ ಎಸ್.ಎಚ್.ಸಾಳುಂಕೆ, ಬಿ.ಎನ್.ಲಂಗೋಟಿ, ಎನ್.ಓ.ಜಾಧವ, ಎಸ್.ಸಿ.ಜಾಲವಾಡಗಿ, ಉಮೇಶ ದೊಡ್ಡಮನಿ, ಬಿ.ಎಫ್.ಬೆಳಗಾವಿ, ಮಾರುತಿ ಭಜಂತ್ರಿ, ರಾಜೀವ ಬಿಷ್ಟಂಡೇರ, ಎಫ್.ಬಿ.ಕುರಿ, ಅನೀಲ ಹುಗ್ಗಿ, ಡಿ.ಎನ್.ಗುಂಡಗೈ, ಎಸ್‌.ಎಚ್‌.ಕೆಂಪಡಿ ಆರ್.ಎಸ್.ಗುಂಜಳರವರ ಕರ್ತವ್ಯವನ್ನು ಪ್ರಶಂಶಿಸಿರುತ್ತಾರೆ.

ಸಿಸಿಬಿ ಘಟಕದಿಂದ ಅಕ್ರಮ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ವಹಿಸಿದ್ದು, ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ದಾಳಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರೆದಿರುತ್ತದೆ ಅಂತಾ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡರವರು ತಿಳಿಸಿರುತ್ತಾರೆ.

Share News

About BigTv News

Check Also

H3N2 ವೈರಸ್‌ ಸೋಂಕು: ಜನರಿಗೆ ಮುನ್ನೆಚ್ಚರಿಕೆ

ಎಚ್‌3ಎನ್‌2 ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ, ತಾಂತ್ರಿಕ ಸಮಿತಿ ಹಾಗೂ ಹಿರಿಯ ಅಧಿಕಾರಿಗೊಳೊಂದಿಗೆ ಸಚಿವರು ಸಭೆ ನಡೆದಿದ್ದು, H3N2 ವೈರಸ್‌ ಸೋಂಕುಗೆ …

Leave a Reply

Your email address will not be published. Required fields are marked *

You cannot copy content of this page