ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ಅಡುಗೆ ಅನಿಲ ದರವನ್ನು ಏರುಸುತ್ತಲೇ ಇದೆ. ದೇಶದ ಜನರಿಗೆ ಅಚ್ಛೇದೀನ್ ಎಂಬ ಆಸೆಯನ್ನು ಹುಟ್ಟಿಸಿ ಜನರನ್ನ ಮೋಸಗೊಳಿಸುತ್ತಿರುವ ದೇಶದ ಪ್ರಥಮ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಏರಿಸುತ್ತಿರುವ ನರೇಂದ್ರ ಮೋದಿ ವಿರುದ್ಧ ಕಾರ್ಯಕರ್ತರು ಇಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ವಾಣಿಜ್ಯ ಬಳಕೆಯ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ನಗರದಲ್ಲಿಂದು, ಕೂಡಲೇ ಏರಿಸಿರುವ ಬೆಲೆ ಏರಿಕೆಯನ್ನು ಇಳಿಸಬೇಕು. ದೇಶದ ಜನರಿಗೆ ಅಚ್ಚೆ ದಿನ್ ಹೆಸರಿನಲ್ಲಿ ಮೋಸ ಮಾಡುತ್ತಿರುವ ನರೇಂದ್ರ ಮೋದಿ ಸರ್ಕಾರ ತೊಲಗಬೇಕು ಎಂದು ಖಾಲಿ ಗ್ಯಾಸ್ ಸಿಲಿಂಡರ್ ಹೊತ್ತು ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಪಾರೋಖ ಅಬ್ಬುನವರ, ಕರ್ನಾಟಕ ಉಸ್ತುವಾರಿಗಳಾದ ಜೀನಲ್ ಗಾಲಾ, ಬಾಬಾಜಾನ ಮುಧೋಳ, ಇನಾಯತಖಾನ ಮುಂತಾದವರು ಭಾಗವಹಿಸಿದ್ದು, ತಹಶಿಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.