Breaking News

ಯುವಜನೋತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಸಿಎಂ, ರಾಜ್ಯಪಾಲ

ಧಾರವಾಡ: ಹುಬ್ಬಳ್ಳಿ, ಧಾರವಾಡದಲ್ಲಿ ಐದು ದಿನಗಳ ಕಾಲ ನಡೆದ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಇಂದು ತೆರೆ ಬೀಳಲಿದ್ದು, ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಅನುರಾಗಸಿಂಗ್ ಠಾಕೂರ್, ಪ್ರಹ್ಲಾದ ಜೋಶಿ ಅವರು ಆಗಮಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಭವನದಲ್ಲಿ ಸಮಾರೋಪ ಸಮಾರಂಭ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹಾಗೂ ಕೇಂದ್ರ ಸಚಿವರಾದ ಅನುರಾಗಸಿಂಗ್ ಠಾಕೂರ್, ಪ್ರಹ್ಲಾದ ಜೋಶಿ ಅವರಿಗೆ ಪಂಜಾಬ್ ವಾದ್ಯ ಮೇಳದ ಮೂಲಕ ಸ್ವಾಗತ ಕೋರಲಾಯಿತು.

ಯುವಜನೋತ್ಸವದಲ್ಲಿ ಪಾಲ್ಗೊಂಡ ವಿವಿಧ ರಾಜ್ಯಗಳ ಯುವಕ, ಯುವತಿಯರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ ಅವರು, ಎಲ್ಲರಿಗೂ ಶುಭಾಶಯ ತಿಳಿಸಿದರು. ನಂತರ ಸಿಎಂ ಹಾಗೂ ರಾಜ್ಯಪಾಲರು ವೇದಿಕೆ ಕಾರ್ಯಕ್ರಮದತ್ತ ತೆರಳಿದರು.

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Share News

About BigTv News

Check Also

Featured Video Play Icon

ಯುವತಿ ಕೊಲೆಗೆ ಪ್ರೇಮ ಪ್ರಕರಣವೇ ಕಾರಣ: ಕಮೀಷನರ್ ರೇಣುಕಾ ಸುಕುಮಾರ್..!

ಹುಬ್ಬಳ್ಳಿ: ಬಿವ್ಹಿಬಿ ‌ಕಾಲೇಜು ಕ್ಯಾಂಪಸ್ ನಲ್ಲಿ ಯುವತಿ ಕೊಲೆ ಪ್ರಕರಣದ ಕಾರಣವನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ‌ಸುಕುಮಾರ ಬಿಚ್ಚಿಟ್ಟಿದ್ದಾರೆ. …

Leave a Reply

Your email address will not be published. Required fields are marked *

You cannot copy content of this page