ಕುಂದಗೋಳ ಮತಕ್ಷೇತ್ರ ಹುಬ್ಬಳ್ಳಿ ತಾಲೂಕಿನ ಶೇರೆವಾಡ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಇವರ ಅಡಿಯಲ್ಲಿ ನಡೆದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ಉದ್ಘಾಟನೆಯನ್ನು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಮಹಿಳೆ ಅಬಲೇಯಲ್ಲ ಸಬಲೇ ಎನ್ನುವಂಥ ಹೆಮ್ಮೆಗೆ ಇಂದು ಧರ್ಮ ಸ್ಥಳ ಗ್ರಾಮಾಭಿವೃದ್ಧಿಯ ಸಂಸ್ಥೆ ಸೇವೆ ಮಾಡುತ್ತಿದೆ. ಇವರ ಕಾರ್ಯ ಶ್ಲಾಘನೀಯ ನಿಮ್ಮ ಜೊತೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕರು ಉಮೇಶ ಹೇಬಸುರ, ಶಿವಾನಂದ ಉಳ್ಳಾಗಡ್ಡಿ, ಯೋಗೀಶ ಎ, ವಿದ್ಯಾ ಕುಂದರಗಿ,ಗಿರಿಜಾ ಪಾಟೀಲ,ಮಹಾದೇವಿ ಅಮತುರ, ಆಶ್ವಿನಿ ತೋಪಣ್ಣವರ, ದಿನೇಶ ಎಂ,ರೇಖಾ ಕಡ್ಲಿಗುಂಡಿ ಜಯಂತ ಕೆ, ದೊಡ್ಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
