ಧಾರವಾಡ: ಧಾರವಾಡ ಸಂಚಾರಿ ಪೊಲೀಸರಿಂದ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ ಕಾರ್ಯಕ್ರಮವನ್ನು ಇಂದು ಧಾರವಾಡದ ಕಲಾಭವನದಿಂದ ಆರಂಭಿಸಲಾಯಿತು. ವಿವೇಕಾನಂದ ಸರ್ಕಲ್ ಮಾರ್ಗವಾಗಿ ಅಕ್ಕಿಪೇಟೆ ವರೆಗೂ ಸಂಚರಿಸಿ ಸಾರ್ವಜನಿಕರಿಗೆ ಸಂಚಾರಿ ಸುರಕ್ಷತಾ ಬಗ್ಗೆ ತಿಳುವಳಿಕೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಸಿಬ್ಬಂದಿ ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿ ನೀಡಿ ಎಲ್ಲಾ ವಿದ್ಯಾರ್ಥಿಗಳಿಗು ಕೂಡ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಪೊಲೀಸ್ ಎಸಿಪಿ ವಿನೋದ್ ಮುಕ್ತದಾರ್, ಸಂಚಾರಿ ಠಾಣೆ ಸಿಪಿಐ ಮಲ್ಲನಗೌಡ ನಾಯ್ಕ, ಧಾರವಾಡ ಶಹರ ಠಾಣೆ ಸಿಪಿಐ ಪ್ರಭು ಗಂಗೆನಹಳ್ಳಿ, ಪಿ ಏಸ್ ಐ ಜಯಾ ಆರ್ ನಾಗಣ್ಣವರ್, ಎ ಏಸ್ ಐ ವೀರೇಶ್ ಬಳ್ಳಾರಿ ಹಾಗೂ ಸಂಚಾರಿ ಠಾಣೆ ಸಿಬ್ಬಂದಿಗಳು ಬಾಗಿಯಾಗಿದ್ದರೂ.