ಹುಬ್ಬಳ್ಳಿ-ಧಾರವಾಡ: ಸೇಂಟ್ರಲ್ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುಣಾವಣೆ ಕಣಕ್ಕೆ ಇಳಿಯುತ್ತಿದ್ದಂತೆ ಅಲ್ಪಸಂಖ್ಯಾತರು ಅಸಮಾದಾನಗೊಂಡಿದ್ದು ಸೇಂಟ್ರಲ್ ಕ್ಷೇತ್ರಕ್ಕೆ ನಾನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಹು-ಧಾ ಮಾಜಿ ಪಾಲಿಕೆ ಸದಸ್ಯ ಅಲ್ತಾಪ್ ಕಿತ್ತೂರ್ ಘೋಷಿಸಿದ್ದಾರೆ.
ನಗರದಲ್ಲಿ ಇಂದು ಶನಿವಾರ ಸುದ್ದಿಗೋಷ್ಠಿ ಏರ್ಪಡಸಿ ಮಾತನಾಡಿದ ಅವರು, ಹು-ಧಾ ಸೇಂಟ್ರಲ್ ಮತ ಕ್ಷೇತ್ರಕ್ಕೆ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಯಾಗಿ ಘೋಷಿಸಿಕೊಂಡಿದ್ದಾರೆ. ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅಲ್ತಾಪ್ ಕಿತ್ತೂರ್ ಬಂಡಾಯ ಅಭ್ಯರ್ಥಿ ಯಾಗಿ ಘೋಷಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಶಾಕ್ ಕೊಟ್ಟಿದಾರೆ, ಕಾಂಗ್ರೆಸ್ ಗೆ ಬಲವಾಗಿರೋ ಅಲ್ಪಸಂಖ್ಯಾತರಿಂದಲೆ ಇಗ ಅಲ್ಪ ಸಂಖ್ಯಾತರ ಮುಖಂಡ ಚುಣಾವಣೆ ಕಣಕ್ಕೆ ಬಂಡಾಯ ಅಭ್ಯರ್ಥಿ ಯಾಗಿ ಇಳದಿದ್ದು ಕಾಂಗ್ರೆಸ್ ಗೆ ಮತ್ತೊಂದು ತಲೆನೋವಾಗಿ ಪರಣಮಿಸಿದೆ. ಒಟ್ಟರೆಯಾಗಿ ಶೆಟ್ಟರನ್ನು ಶತಾಯ ಗತಾಯ ಗೆಲ್ಲಿಸಲೆಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಅಲ್ತಾಪ್ ಕಿತ್ತೂರು ದೊಡ್ಡ ಶಾಕ್ ನೀಡಿದ್ದು ಹು-ಧಾ ಸೇಂಟ್ರಲ್ ಈ ಭಾರಿ ಚುಣಾವಣೆಯಲ್ಲಿ ಹೈವೋಲ್ಟೆಜ್ ಕಣವಾಗಿದ್ದು ಚುಣಾವಣೆ ಮಾತ್ರ ಭರ್ಜರಿಯಾಗಿ ನಡೆಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





