ಹುಬ್ಬಳ್ಳಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಅಳಿಯನೇ ಮಾವನನ್ನು ಭೀಕರವಾಗಿ 20 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸುಳ್ಳ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸುಳ್ಳದ ಗ್ರಾಮದ ಶಿವಪ್ಪ ಎಂಬಾತನ ಜೊತೆ ಆತನ ಅಳಿಯ ಆಸ್ತಿಯ ವಿಚಾರಕ್ಕೆ ಜಗಳ ತೆಗೆದಿದ್ದ ಇದೇ ವೇಳೆ ಊರಿನಲ್ಲಿರುವ ಹಾಲಿನ ಕೇಂದ್ರದ ಮುಂದೆಯೇ ಚಾಕುವಿನಿಂದ 22 ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ ಸದ್ಯ ಕೊಲೆಯ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.22 ಕ್ಕೂ ಹೆಚ್ಚು ಬಾರಿ ಶಿವಪ್ಪನ ಮೇಲೆ ಆತನ ಅಳಿಯ ಚಾಕು ಇರಿದ ನಂತರ ಚಾಕು ಶಿವಪ್ಪನ ದೇಹದಲ್ಲಿ ಸಿಲುಕಿಕೊಂಡಿದೆ ಆಗ ಅಲ್ಲಿನ ಗ್ರಾಮಸ್ಥರು ಬಂದು ಅಳಿಯನನ್ನು ತಡೆಯಲು ಪ್ರಯತ್ನ ಪಟ್ಟಿದ್ದಾರೆ.ಆದರೆ ಅಷ್ಟರಲ್ಲಾಗಲೇ ಶಿವಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಆರೋಪಿ ಪತ್ತೆಗಾಗಿ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ ಬಲೆ ಬಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

