ಉಳಿತಾಯ ಬಜೆಟ್ ರೂಪಿಸಿದ್ದು, 2023-24ನೇ ಸಾಲಿಗೆ 1 ಕೋಟಿ 70ಲಕ್ಷ 56 ಸಾವಿರ ರೂ.ಉಳಿತಾಯ ಬಜೆಟ್ ಮಂಡನೆಯಾಗಿದೆ. ಮನೆ ಕರ, ಮಳಿಗೆ ಬಾಡಿಗೆ, ನೀರಿನ ಕರ ಮತ್ತು ಇತರೆ ಮೂಲದಿಂದ 3 ಕೋಟಿ 22 ಲಕ್ಷ 33 ಸಾವಿರ ರೂ.ಗಳನ್ನು ಅಂದಾಜಿಸಲಾಗಿದೆ. ಅನುದಾನದ ಮೂಲ ಎಸ್. ಎಫ್.ಸಿ ಮುಕ್ತ ನಿಧಿ 15 ನೇ ಹಣಕಾಸು ಮತ್ತು ಇತರೆ ಅನುದಾನದ ಮೂಲದಿಂದ 7 ಕೋಟಿ 81 ಲಕ್ಷ 76 ಸಾವಿರ ನಿರೀಕ್ಷಿಸಲಾಗಿದೆ. ಇತರೆ ಅಸಾಮಾನ್ಯ ಖಾತೆಯಿಂದ 1 ಕೋಟಿ 54 ಲಕ್ಷ 55 ಸಾವಿರ ನಿರೀಕ್ಷಿಸಲಾಗಿದೆ. ಹೀಗೆ ಒಟ್ಟು ಆದಾಯ 13 ಕೋಟಿ 20 ಲಕ್ಷ 75 ಸಾವಿರ, ಆರಂಭಿಕ ಶಿಲ್ಕು 10 ಕೋಟಿ 19 ಲಕ್ಷ 58 ಸಾವಿರ ಕೂಡಿಸಿ ಒಟ್ಟು ಬಜೆಟ್ ಗಾತ್ರ 23 ಕೋಟಿ 40 ಲಕ್ಷ 34 ಸಾವಿರ ರೂಪಾಯಿ, ಆಡಳಿತ ಮತ್ತು ಕಚೇರಿ ವೆಚ್ಚ, ನೀರು ಸರಬರಾಜು, ಬೀದಿ ದೀಪ, ಸಾರ್ವಜನಿಕ ಆರೋಗ್ಯ ಇತ್ಯಾದಿಗಳಿಗಾಗಿ 3 ಕೋಟಿ 95 ಲಕ್ಷ 85 ಸಾವಿರ ಮೀಸಲಿಡಲಾಗಿದೆ. ಅನುದಾನದಿಂದ ಬಂದಂತಹ ಮೊತ್ತವನ್ನು ಪುರಸಭೆ ನೌಕರರ ವೇತನ, ನೀರು ಸರಬರಾಜು ಮತ್ತು ಬೀದಿ ದೀಪ ವಿದ್ಯುತ್ ಬಿಲ್ ಪಾವತಿ, ರಸ್ತೆ ಮತ್ತು ಚರಂಡಿ ಇತ್ಯಾದಿಗಳಿಗಾಗಿ ಒಟ್ಟು 7 ಕೋಟಿ 81 ಲಕ್ಷ 76 ಸಾವಿರ ಮೀಸಲಿಡಲಾಗಿದೆ. ಆರಂಭಿಕ ಶಿಲ್ಕಿನಲ್ಲಿ ಉಳಿದಂತಹ ಅನುದಾನ ಬಾಕಿ ಕಾಮಗಾರಿಗಳಿಗೆ ಐ.ಡಿ.ಎಸ್.ಎಂ.ಟಿ ಮಳಿಗೆ ನಿರ್ಮಾಣ ಮತ್ತು ಉಳಿಕೆ ಅನುದಾನದ ಕಾಮಗಾರಿಗಾಗಿ 3 ಕೋಟಿ 70 ಲಕ್ಷ ಮೀಸಲಿಡಲಾಗಿದೆ. ಹೀಗೆ ಒಟ್ಟು 21 ಕೋಟಿ 69 ಲಕ್ಷ 77 ಸಾವಿರ ರೂ. ಪಾವತಿಗಳನ್ನು ಅಂದಾಜಿಸಲಾಗಿದೆ. ಒಟ್ಟು ಬಜೆಟ್ ಗಾತ್ರ 23 ಕೋಟಿ 40 ಲಕ್ಷ 34 ಸಾವಿರ ರೂಪಾಯಿ ಗಳು ಅಂದಾಜಿಸಲಾಗಿದೆ.
ಪುರಸಭೆ ನಿಧಿಯಲ್ಲಿ ಶೇ.24.10 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ 3 ಲಕ್ಷ 14 ಸಾವಿರ, ಶೇ.7.25 ರಲ್ಲಿ ಇತರೆ ಬಡ ಜನರ ಕಲ್ಯಾಣಕ್ಕಾಗಿ 94 ಸಾವಿರ, ಶೇ. 5 ಅಂಗವಿಕಲರ ಕಲ್ಯಾಣಕ್ಕಾಗಿ 65 ಸಾವಿರ ಮತ್ತು ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 13 ಸಾವಿರಗಳನ್ನು ಮೀಸಲಿಡಲಾಗಿದೆ. ಎಸ್. ಎಫ್.ಸಿ ಮುಕ್ತ ನಿಧಿಯಲ್ಲಿ ಶೇ.24.10 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ 17 ಲಕ್ಷ, ಶೇ.7.25 ರಲ್ಲಿ ಇತರೆ ಬಡ ಜನರ ಕಲ್ಯಾಣಕ್ಕಾಗಿ 1 ಲಕ್ಷ 47 ಸಾವಿರ , ಶೇ.5 ಅಂಗವಿಕರ ಕಲ್ಯಾಣಕ್ಕಾಗಿ 1 ಲಕ್ಷ 1 ಸಾವಿರಗಳನ್ನು ಮೀಸಲಿಡಲಾಗಿದೆ. ಇನ್ನು ಬಜೆಟ್ ನ ವಿಶೇಷತೆ ಎಂದರೆ ಕೋವಿಡ್ 19 ರೋಗದ ಸಂದರ್ಭದಲ್ಲಿ ಕೂಡಾ ನಿರಂತರ ಸೇವೆಗೈದ ಹೊರಗುತ್ತಿಗೆ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಗಳ ವೇತನಕ್ಕಾಗಿ ಪುರಸಭೆ ನಿಧಿಯಿಂದ ಹೆಚ್ಚಿನ ಮೊತ್ತವನ್ನು ಮೀಸಲಿಡಲಾಗಿದೆ.
ಹಲವು ಸದಸ್ಯರು ಬಜೆಟ್ ಮಂಡನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಇನ್ನೂ ಕೆಲವರು ಬಜೆಟ್ ಕಾರ್ಯರೂಪಕ್ಕೆ ತರಲು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸದಸ್ಯ ರಾಜಣ್ಣ ಕುಂಬಿ ಅವರು ಪುರಸಭೆ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಬಜೆಟ್ ಆಗಿದ್ದು, ಮಂಡನೆಯಾದ ಬಜೆಟ್ ಕಾರ್ಯ ರೂಪಕ್ಕೆ ಬರಬೇಕು.ಅದಲ್ಲದೆ ಈ ಹಿಂದೆ ಬಜೆಟ್ ನಲ್ಲಿ ಘೋಷಣೆಯಾದ ಊರಿನ ಸ್ವಾಗತ ಬೋರ್ಡ್ ಹಾಗೂ ಪುರಸಭೆಯ ಮುಖ್ಯಾಧಿಕಾರಿ, ಅಧ್ಯಕ್ಷರಿಗೆ ಸಂಚರಿಸಲು ಒಂದು ವಾಹನ ಖರೀದಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಪೂಜಾ ಕರಾಟೆ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಸದಸ್ಯರಾದ ಬಸವರಾಜ ಓದುನವರ, ಜಯಕ್ಕ ಕಳ್ಳಿ, ಪ್ರವೀಣ ಬಾಳಿಕಾಯಿ, ಮಹದೇವಪ್ಪ ಅಣ್ಣಿಗೇರಿ,ಸಾಹೇಬಜಾನ ಹವಾಲ್ದಾರ, ವಿಜಯ ಕರಡಿ,ರಮೇಶ ಗಡದವರ ಅಶ್ವಿನಿ ಅಂಕಲಕೋಟಿ, ಪೂರ್ಣಮಾ ಪಾಟೀಲ, ವಾಣಿ ಹತ್ತಿ, ಯಲ್ಲವ್ವ ದುರಗಣ್ಣನವರ, ಮಂಜುಳಾ ಗುಂಜಳ ಕವಿತಾ ಶೇರಸೂರಿ, ಸಿಕಂದರ ಕಣಕೆ ಮುಸ್ತಾಕಅಹ್ಮದ ಶಿರಹಟ್ಟಿ, ಪ್ರಕಾಶ ಮಾದನೂರ, ರುದ್ರಪ್ಪ ಉಮಚಗಿ, ನಾಗೇಶ ಅಮರಾಪುರ, ಪುರಸಭೆ ಮುಖ್ಯಾದಿಕಾರಿ ಶಂಕರ ಹುಲ್ಲಮ್ಮನವರ ಸಿಬ್ಬಂದಿಗಳು ಉಪಸ್ಥಿತರಿದ್ದರು
